ಶ್ರೀ ಕ್ಷೇತ್ರ ಏರಮಲೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜಾ ಬಂಟ್ವಾಳ್

0

ಬಂಟ್ವಾಳ: ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಆ.6ರಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ನಿಕಟಪೂರ್ವ ಅಧ್ಯಕ್ಷ ಕೇಶವ ಶಾಂತಿ ಅಧ್ಯಕತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕ್ಷೇತ್ರದ ತಂತ್ರಿಗಳಾಗಿ ಕೇಶವ ಶಾಂತಿ ಮತ್ತು ಯಜಮಾನರಾಗಿ ಮೋನಪ್ಪ ಪೂಜಾರಿ ಹೊಸಮನೆ ಅವರನ್ನು ಘೋಷಿಸಲಾಯಿತು.
ಕಾರ್ಯಾಧ್ಯಕ್ಷರಾಗಿ ಜಗನ್ನಾಥ ಬಂಗೇರ ನಿರ್ಮಾಲ್’ ,ಕಾರ್ಯದರ್ಶಿಯಾಗಿ ಮನೋಜ್ ಕೇದಿಗೆ, ಸಹ ಕಾರ್ಯದರ್ಶಿಯಾಗಿ ಪ್ರೇಮನಾಥ ಶೆಟ್ಟಿ ಅಂತರ, ಕೋಶಾಧಿಕಾರಿಯಾಗಿ ಕಿಶೋರ್ ಕಲ್ಯಾಣ ಅಗ್ರಹಾರ, ವ್ಯವಸ್ಥಾಪಕರಾಗಿ ಸಂಜೀವ ಸಪಲ್ಯ ಕೇದಿಗೆ, ಚಂದ್ರಶೇಖರ ಕಲ್ಯಾಣ ಅಗ್ರಹಾರ, ರಾಜೇಶ್ ಹೊಸಮನೆ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ರಘು ಸಪಲ್ಯ, ಕೇಶವ ಪಲ್ಲತಿಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here