ಬಂಟ್ವಾಳ :ಕರಿಯಂಗಳ ಗ್ರಾಮದ ಪೊಳಲಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಯು ಯಾಂತ್ರೀಕೃತ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪೊಳಲಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಕಳೆದ ಎರಡು ವರ್ಷದಿಂದ ಭದ್ರ ಕಜೆ ತಳಿಯ ಭತ್ತ ಬೇಸಾಯ ಮಾಡಲಾಗುತ್ತಿದ್ದು, ಆಧುನಿಕ ಯಂತ್ರೋಪಕರಣಗಳ ಮೂಲಕ ಕೃಷಿ ಮಾಡಿದರೆ ಇಳುವರಿ ಹೆಚ್ಚುವುದರ ಮೂಲಕ ಬೇಸಾಯ ಖರ್ಚು ಕಡಿಮೆಯಾಗಿ ರೈತರ ಆದಾಯ ದ್ವಿಗುಣಗೊಳ್ಳುವುದೆಂದು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಜಿಲ್ಲೆಯಲ್ಲಿ ಹಡೀಲು ಬೇಸಾಯ ಕೈಗೊಂಡಲ್ಲಿ ಭತ್ತ ಬೆಳೆ ವಿಸ್ತೀರ್ಣ ಅಧಿಕಗೊಂಡು ಆಹಾರ ಧಾನ್ಯ ಭತ್ತ ಬೆಳೆಯ ಉತ್ಪಾದನೆ ಹೆಚ್ಚಾಗುವುದು ಎಂದು ತಿಳಿಸಿದರು.
ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕಿ ಭಾರತಿ, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ಕೃಷಿ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಪಿ, ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್,ಮಾಜಿ ತಾ.ಪ ಅಧ್ಯಕ್ಷರು ಯಶವಂತ ದೇರಾಜೆ,ಮಾಜಿ ತಾ.ಪ ಸದಸ್ಯ ಯಶವಂತ ಪೊಳಲಿ ,ಕರಿಯಂಗಳ ಪಂಚಾಯತ್ ಮಾಜಿ ಅಧ್ಯಕ್ಷರು ಚಂದ್ರಾವತಿ , ಪ್ರಗತಿಪರ ಕೃಷಿಕ ವೆಂಕಟೇಶ ನಾವುಡ,ಪ್ರಗತಿಪರ ಯುವ ಕೃಷಿ ಉದ್ಯಮಿ ಪಶುಪತಿ ಗೌಡ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹನಮಂತ ಕಾಳಗಿ,ನಿತಿನ್ ಮತ್ತು ಸಚಿನ್ ಕೃಷಿ ಇಲಾಖೆಯ ಸಿಬ್ಬಂದಿ ಮತ್ತಿತರರು ಹಾಜರಿದ್ದರು.