ಶಂಭೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಬಂಟ್ಟಾಳ : ಶಂಭೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಜು.25ರಂದು ಶೇಡಿಗುರಿ ಸಾರ್ವಜನಿಕ ಗಣೇಶೋತ್ಸವ ಸಭಾಂಗಣದಲ್ಲಿ ನಡೆಯಿತು.

ಪ್ರಸಕ್ತ ವರ್ಷದಲ್ಲಿ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಮತಾ ಕಮಲಾಕ್ಷ ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಸದ್ರಿ ವರ್ಷದಲ್ಲಿ 4.61 ಲಕ್ಷ ನಿವ್ವಳ ಲಾಭ ಗಳಿಸಿದ್ದು ಹಾಲು ಉತ್ಪಾದಕರಿಗೆ ಶೇ. 20% ಬೋನಸ್ ಘೋಷಿಸಲಾಯಿತು.
ಈ ಸಭೆಯಲ್ಲಿ ಕೆ.ಎಂ.ಎಫ್ ವಿಸ್ತರಣಾಧಿಕಾರಿ ಜಗದೀಶ್ ಅವರು ಮಾತನಾಡಿ ಸಂಘದ ಅಭಿವೃದ್ದಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಹಕಾರಿ ಯುನಿಯನ್ ಇದರ ಸಿ.ಇ.ಒ ಹೀರೇಮಠ್ ಅವರು ಹಾಲು ಉತ್ಪಾದಕರಿಗೆ ಗುಣಮಟ್ಟದ ಹಾಲು ಪೂರೈಸುವಂತೆ ಮನವಿ ಮಾಡಿದರು.


ಸಭೆಯಲ್ಲಿ ಸಂಘ ಉಪಾಧ್ಯಕ್ಷೆ ಸಿಸಿಲಿಯಾ ಪಿಂಟೊ ಹಾಗೂ ನಿರ್ದೇಶಕರುಗಳಾದ ವಿಶಾಲ, ಗೀತಾ ಎಸ್. ಹೊಳ್ಳ, ಗೀತಾ, ವಾರಿಜ, ವಸಂತಿ, ಮೋಹಿನಿ, ಸುನಂದ, ಪ್ರಭಾವತಿ, ಗಿರಿಜಾ, ಮೀನಾಕ್ಷಿ, ಬಿಡುಗು ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಭವಾನಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here