ಬಂಟ್ವಾಳ : ಜಾತ್ಯಾತೀತ ಜನತಾದಳ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಭೆಯು ಬಿ ಸಿ ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕರ್ನಾಟಕ ರಾಜ್ಯ ಜಾತ್ಯಾತೀತ ಜನತಾದಳದ ಸಂಘಟನಾ ಕಾರ್ಯದರ್ಶಿ, ನ್ಯಾಯವಾದಿ ಉಮೇಶ್ ಕುಮಾರ್ ವೈ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ ಉಧ್ಘಾಟಿಸಿದರು.
ಜೆಡಿಎಸ್ ದ ಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ಉಪಾಧ್ಯಕ್ಷ ಪ್ರಕಾಶ್ ಗೋಮ್ಸ್ ಲೊರೆಟ್ಟೊ, ಜೆಡಿಎಸ್ ಮುಖಂಡರಾದ ಇಬ್ರಾಹಿಂ ಕೈಲಾರ್, ಮುಹಮ್ಮದ್ ಶಫೀಕ್ ಆಲಡ್ಕ, ಜೀವನ್ ಪಾಲ್ ಡಿ ಕುನ್ಹಾ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಜೆಡಿಎಸ್ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಚಿನ್ನಪ್ಪ ಬಂಗೇರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪಕ್ಷ ಸಂಘಟನೆ, ವಿಧಾನಸಭಾ ಚುನಾವಣೆ, ಯುವ ಘಟಕ, ಹಿಂದುಳಿದ ಘಟಕ, ಮಹಿಳಾ ಘಟಕಗಳಿಗೆ ನೂತನ ಪಧಾಧಿಕಾರಿಗಳ ಆಯ್ಕೆ ಮಾಡುವ ವಿಚಾರವಾಗಿ ಹಾಗೂ ಮುಂದಿನ ಕಾರ್ಯಕರ್ತರ ಸಭೆಯ ಬಗ್ಗೆ ಚರ್ಚಿಸಲಾಯಿತು.