ಬಂಟ್ವಾಳ :ಬೈಕ್ ಮುಖಾಮುಖಿ ಡಿಕ್ಕಿ- ಓರ್ವ ಮೃತ್ಯು

0

ಬಂಟ್ವಾಳ : ಉಳಿ ಗ್ರಾಮದ ಅಂಕರೋಡಿ ಬಳಿ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಮೃತಪಟ್ಟ ಘಟನೆ ಮಾ.27ರಂದು ನಡೆದಿದೆ.ಬೆಳ್ತಂಗಡಿ ತಾಲೂಕಿನ ಬಂಗೇರಕಟ್ಟೆ ನಿವಾಸಿ ಫಯಾಜ್ ಮೃತಪಟ್ಟ ವ್ಯಕ್ತಿ.

ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಿಂದ ಗಂಭೀರ ಗಾಯಗೊಂಡ ಫಯಾಜ್ ನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಫಯಾಜ್ ಮೃತಪಟ್ಟಿದ್ದಾನೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here