ಸಿದ್ಧರಾಮಯ್ಯರ ಸರಕಾರ ಇದ್ದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಕೆಲಸಗಳಾಗಿದೆ: ರಮಾನಾಥ ರೈ
ವಿಟ್ಲ: ಬಿಜೆಪಿಯ ಭರವಸೆಗಳ ಹಿಂದೆ ಹೋದ ಜನರಿಗೆ ಸರಿಯಾದ ವಿಚಾರ ತಿಳಿಯುತ್ತಿದೆ. ಸಿದ್ಧರಾಮಯ್ಯರವರ ಸರ್ಕಾರ ಇದ್ದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಕೆಲಸಗಳಾಗಿದೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.೯೮ರಷ್ಟನ್ನು ಅಧಿಕಾರಕ್ಕೆ ಬಂದಾಗ ಪೂರೈಸುವ ಕಾರ್ಯವನ್ನು ಮಾಡಿದೆ. ಯಾವುದೇ ತಪ್ಪು ಕೆಲಸವನ್ನು ಮಾಡದ ನನಗೆ ಜನರು ಇನ್ನೊಂದು ಅವಕಾಶವನ್ನು ನೀಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ೧೦ನೇ ದಿನವಾದ ಮಾ. ೧೯ರಂದು ವಿಟ್ಲಪಡ್ನೂರು, ಕೊಳ್ನಾಡು, ಮಂಚಿ ಗ್ರಾಮದಲ್ಲಿ ಸಂಚರಿಸಲಿದ್ದ ಯಾತ್ರೆಗೆ ಕಡಂಬುವಿನಲ್ಲಿ ಚಾಲನೆ ನೀಡಿ ಮಾತನಾಡಿದರು. ಯಾತ್ರೆಯು ಕೊಡಂಗಾಯಿ, ಪರ್ತಿಪ್ಪಾಡಿ, ಸರವು ಮದಕ, ತಳಿತ್ತನೂಜಿ – ನಾರ್ಶ, ಸೆರ್ಕಳ ಮಾದಕಟ್ಟೆ ಮದಕ, ಕುಡ್ತಮುಗೇರು ಪೇಟೆ ಸಾಲೆತ್ತೂರು ಕಟ್ಟೆ, ಸಾಲೆತ್ತೂರು ವಲಯ ಕಾಂಗ್ರೆಸ್ ಕಛೇರಿ, ಸಾಲೆತ್ತೂರು ಜಂಕ್ಷನ್ ನಿಂದಾಗಿ ಸಾಗಿ ಸಾಯಂಕಾಲ ಕುಕ್ಕಾಜೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಯಾತ್ರೆಯ ಸಂಚಾಲಕ ಪಿಯೂಸ್ ಎಲ್.ರಾಡ್ರಿಗಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್‌ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ತಾ.ಪಂ. ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಯೂತ್ ಅಧ್ಯಕ್ಷ ಇಬ್ರಾಹಿಂ ನವಾರh, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಕೊಳ್ನಾಡು ವಲಯಾಧ್ಯಕ್ಷ ಪವಿತ್ರ ಪೂಂಜ, ವಿಟ್ಲಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಕೊಳ್ನಾಡು ವಲಯ ಅಧ್ಯಕ್ಷ ಪವಿತ್ರ ಪೂಂಜಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲೀನಾ ಡಿ ಸೋಜಾ ಪ್ರಮುಖರಾದ ಐಡಾ ಸುರೇಶ್, ಲೋಲಾಕ್ಷಿ ಶೆಟ್ಟಿ, ಪದ್ಮನಾಭ ರೈ, ಹರ್ಷದ್ ಸರವು, ಚಿತ್ತರಂಜನ್ ಶೆಟ್ಟಿ, ಮೋಹನದಾಸ್, ಬ್ಲಾಕ್ ಕಾರ್ಯದರ್ಶಿ ಪ್ರಶಾಂತ್ ಪಕ್ಕಳ, ಸಿದ್ಧಿಕ್ ಸರವು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಬಿಸಾ ಖಾದರ್, ಪಂಚಾಯತ್ ಸದಸ್ಯರುಗಳಾದ ಅಶ್ರಫ್ ಕೆ, ರಝಕ್ ಸೆರ್ಕಳ, ಹಮೀದ್, ಗಂಗಾಧರ ಪೂಜಾರಿ, ಪದ್ಮನಾಭ, ಜಯಂತಿ ಎಸ್ ಪೂಜಾರಿ, ಸಂಜೀವಿ , ರತ್ನಾ , ನತಾಲಿನ ಡಿ ಸೋಜ , ಲವೀನಾ, ಜಯಂತಿ , ದೇವಕಿ ಸುಲೋಚನಾ, ಭಾಗೀರಥಿ, ಸೋಮಶೇಖರ್ ಗೌಡ, ಖಾದರ್ ನಾರ್ಷ ,ಹಸೈನಾರ್ ತಾಳಿತ್ತನೂಜಿ, ಯೂತ್ ಕಾಂಗ್ರೆಸ್ ನ ಹಫೀಜ್ ಕಟ್ಟೆ, ಮುಸ್ತಫಾ, ಗಂಗಾಧರ್ ಚೌಟ ಖಾದರ್ ಮೂಸಾ, ಫೆಲಿಕ್ಸ್, ಜೆರ್ಮಿ ಡಿ ಸೋಜಾ , ಜಕಾರಿಯಾ , ಕರೀಂ ಕದ್ಕರ್ ಸುಲೈಮಾನ್ ಕಟ್ಟೆ, ಜೋನ್ ಡಿ ಸೋಜಾ , ದಿವಾಕರ್ ಆಚಾರ್ಯ, ಅಬ್ದುಲ್ ರಹಿಮಾನ್ ಸಂದೀಪ್ ಶೆಟ್ಟಿ, ರಝಾಕ್ ಸುರಿಬೈಲ್, ಶಶಿಧರ್ ಕಾಡುಮಠ , ವೀಣಾ ಕಾಡುಮಠ ಮೊದಲಾದವರು ಉಪಸ್ಥಿತರಿದ್ದರು.