ಒಂಬತ್ತನೇ ದಿನದ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಸಾಲೆತ್ತೂರಿನಲ್ಲಿ ಚಾಲನೆ

0

ನಾನು ಸೋತಿರುವುದರಲ್ಲಿ ಬೇಸರವಿಲ್ಲ ನನ್ನನ್ನು ಸೋಲಿಸಿದ ರೀತಿ ಬೇಸರತಂದಿದೆ: ಬಿ‌. ರಮಾನಾಥ ರೈ

ವಿಟ್ಲ: ನಾನು ಸೋತಿರುವುದರಲ್ಲಿ ಬೇಸರವಿಲ್ಲ ಆದರೆ ನನ್ನನ್ನು ಅಪಪ್ರಚಾರದ ಮೂಲಕ ಸೋಲಿಸುವ ಕೆಲಸವಾಯಿತು. ಅದು ನನಗೆ ಬೇಸರು ತಂದ ವಿಚಾರವಾಗಿದೆ. ನನ್ನ ಕ್ಷೇತ್ರದಲ್ಲಿ ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನಾವೆಲ್ಲರೂ ದೃತಿಗೆಡದೆ ಒಗ್ಗಟ್ಟಿನಿಂದ ಮನ್ನುಗ್ಗುವ. ಸತ್ಯ ನಿಧಾನವಾಗಿಯಾದರು ಹೊರಬರುತ್ತದೆ. ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಉತ್ತಮ ರೀತಿಯಲ್ಲಿ ಮಾಡಿದ್ದೇನೆ. ಪ್ರಾಮಾಣಿಕವಾಗಿ ಸುದೀರ್ಘ ರಾಜಕೀಯ ಮಾಡಿದ್ದೇನೆ. ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ಕ್ಷೇತ್ರದ ಜನ ಹಾಗೂ ಈ ರಾಜ್ಯದ ಜನರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ಬಂಟ್ವಾಳ ಕ್ಷೇತ್ರಕ್ಕೆ ನಿಸ್ವಾರ್ಥವಾಗಿ ದುಡಿದಿದ್ದೇನೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈರವರು ಹೇಳಿದರು‌.

ಅವರು ಮಾ.೧೮ರಂದು ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ೯ನೇ ದಿನದ ಕಾರ್ಯಕ್ರಕ್ಕೆ ಸಾಲೆತ್ತೂರಿನಲ್ಲಿ ಚಾಲನೆ ನೀಡಿ ಮಾತನಾಡಿದರು‌.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಾಜಿ ತಾ.ಪಂ. ಸದಸ್ಯ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣಿಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಯೂತ್ ಅಧ್ಯಕ್ಷ ಇಬ್ರಾಹಿಂ ನವಾಝ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಯಾತ್ರೆಯ ಸಂಚಾಲಕ ಪಿಯೂಸ್ ಎಲ್ ತೋಡ್ರಿಗಸ್, ಸಾಲೆತ್ತೂರು ಗ್ರಾ.ಪಂ. ಅಧ್ಯಕ್ಷ. ಹಸೈನಾರ್, ಉಪಾಧ್ಯಕ್ಷೆ ಅಮಿತಾ ಎಸ್. ಭಂಡಾರಿ, ಕೊಳ್ನಾಡು ವಲಯಾಧ್ಯಕ್ಷ ಪವಿತ್ರ ಪೂಂಜ,ಬ್ಲಾಕ್ ಕಾರ್ಯದರ್ಶಿ ಪ್ರಶಾಂತ್ ಪಕಳ, ಸಾಲೆತ್ತೂರು ಪಂಚಾಯತ್ ಸದಸ್ಯರಾದ ಮೀನಾಕ್ಷಿ, ಪ್ರೇಮಲತಾ, ಪ್ರಮುಖರಾದ ಹೈಡಾಸುರೇಶ್, ಲೋಲಾಕ್ಷಿ ಶೆಟ್ಟಿ, ಪದ್ಮನಾಭ ರೈ, ಹರ್ಷಾದ್ ಶರಾವು, ಚಿತ್ತರಂಜನ್ ಶೆಟ್ಟಿ, ಮೋಹನದಾಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here