
ಬಂಟ್ವಾಳ : ಬಂಟ್ವಾಳ ಎಸ್.ವಿ.ಎಸ್ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಎ.ಬಿ. ಇವರು ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ೧೪ರ ವಯೋಮಾನದ ಬಾಲಕರ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಸೆಪ್ಟೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರು ಪುತ್ತೂರು ಜೀನಿಯಸ್ ಚೆಸ್ ಕೋಚ್ ಸತ್ಯ ಪ್ರಸಾದ್ ಕೋಟೆ ಇವರ ಶಿಷ್ಯರಾಗಿದ್ದು ಹಾಗೂ ಭೂಮಾಪಕರಾದ ಆಶಾ ಮತ್ತು ಬಸವಲಿಂಗೇಗೌಡ ಇವರ ಪುತ್ರ.
