ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ಉದ್ಘಾಟನೆ

0

ಜಾತ್ರೆಯ ವ್ಯಾಪಾರ ದೇವರ ಸೇವೆ : ಡಾ. ಪ್ರಭಾಕರ ಭಟ್


ಬಂಟ್ವಾಳ: ದೇವಸ್ಥಾನ ದೈವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ದೇವರ ಸೇವೆ ಎಂದು ಅನೇಕರು ಸಣ್ಣಸಣ್ಣ ವ್ಯಾಪಾರಗಳನ್ನು ಮಾಡುತ್ತಾರೆ. ಕೇವಲ ಲಾಭಕ್ಕೆಂದು ಮಾಡದೆ ಜನಸೇವೆಯೆಂದು ಅನೇಕ ವರ್ಷಗಳಿಂದ ವ್ಯಾಪಾರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರೆಲ್ಲ ಸಂಘಟಿತರಾಗಿ ಭಕ್ತಾಧಿಗಳಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ಕಲ್ಲಡ್ಕ ಶ್ರೀ ರಾಮಮಂದಿರದಲ್ಲಿ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.


ಬಜರಂಗದಳ ಜಿಲ್ಲಾ ಸಹಸಂಚಾಲಕ ಗುರುರಾಜ ಬಂಟ್ವಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ , ಗೋಳ್ತಮಜಲು ಗ್ರಾಮ ಪಂ. ಮಾಜಿ ಅಧ್ಯಕ್ಷ ಶೇಖರ ಜಿ. ಕೊಟ್ಟಾರಿ , ಹಿಂದೂ ಜಾರಗಣ ವೇದಿಕೆಯ ಸಂಚಾಲಕ ಅಕ್ಷಯ್ ರಜಪೂತ್ ವಿಟ್ಲ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಚಾಲಕ ರತ್ನಾಕರ ಶೆಟ್ಟಿ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜಯರಾಮ ಶೆಟ್ಟಿಗಾರ್ ನೆಟ್ಲ ಸ್ವಾಗತಿಸಿ , ಸತೀಶ್ ಬಂಗೇರ ತುಂಬೆ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here