ಪುತ್ತೂರು: ಗ್ರೇಡ್ -1 ಮುಖ್ಯಾಧಿಕಾರಿಯಾಗಿ ಪದೋನ್ನತಿ ಪಡೆದಿರುವ ಲೀನಾ ಬ್ರಿಟ್ಟೋ ಅವರು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೂಲತಃ ಕೊಡಗು ನಿವಾಸಿಯಾಗಿರುವ ಲೀನಾ ಬ್ರಿಟ್ಟೋರವರು ಕ್ರಮವಾಗಿ ಶಿರಸಿ ಪುರಸಭೆ, ಪುತ್ತೂರು ಪುರಸಭೆ, ಸುಳ್ಯ ಪಟ್ಟಣ ಪಂಚಾಯತ್, ಪುತ್ತೂರು ಪುರಸಭೆ, ಮೂಡಬಿದ್ರೆ ಪುರಸಭೆ, ಹೊನ್ನಾವರ ಪಟ್ಟಣ ಪಂಚಾಯತ್, ಮೂಡಿಗೆರೆ ಪಟ್ಟಣ ಪಂಚಾಯತ್, ಬಂಟ್ವಾಳ ಪುರಸಭೆ, ವಿಟ್ಲ ಪಟ್ಟಣ ಪಂಚಾಯತ್, ಬೇಲೂರು ಪುರಸಭೆ, ಪುತ್ತೂರು ನಗರಸಭೆ ಮತ್ತು ಬಂಟ್ವಾಳ ಪುರಸಭೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಕೆಲವು ಸಮಯದ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಛೇರಿ ವ್ಯವಸ್ಥಾಪಕಿಯಾಗಿ ವರ್ಗಾವಣೆಗೊಂಡಿದ್ದ ಇವರು ಇದೀಗ ಗ್ರೇಡ್ -1 ಮುಖ್ಯಾಧಿಕಾರಿಯಾಗಿ ಭಡ್ತಿ ಪಡೆದಿದ್ದಾರೆ. ಅಲ್ಲದೆ, ಮೂರನೇ ಬಾರಿಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೋರ್ಪೋರೇಷನ್ ಬ್ಯಾಂಕ್ ಪ್ರಬಂಧಕರಾಗಿದ್ದ ದಿ.ಫ್ರಾನ್ಸಿಸ್ ಡಿ’ಸೋಜಾರವರ ಪತ್ನಿಯಾಗಿರುವ ಲೀನಾ ಬ್ರಿಟ್ಟೋ ಅವರ ಪುತ್ರ ಅಖಿಲ್ ಡಿ’ಸೋಜಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವೃತ್ತಿಯಲ್ಲಿದ್ದು ಪುತ್ರಿ ಅನಿಷಾ ಡಿ’ ಸೋಜಾ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Home ಇತ್ತೀಚಿನ ಸುದ್ದಿಗಳು ಲೀನಾ ಬ್ರಿಟ್ಟೋರವರಿಗೆ ಪದೋನ್ನತಿ: ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರ್