ಪುತ್ತೂರು:`ಅವತ್ತು ನಾನು ಅವರ ಜೊತೆ ಇರ್ತಿದ್ರೆ ನಾವಿಬ್ಬರೂ ಒಟ್ಟಿಗೇ ಹೋಗ್ತಿದ್ದೆವು ಇಲ್ಲಾ ಅವರ ಜೀವ ಉಳೀತಿತ್ತು’ ಮುಖ್ಯಮಂತ್ರಿಯವರ ಜೊತೆ ಅಳಲು ತೋಡಿಕೊಂಡ ಪ್ರವೀಣ್ ಪತ್ನಿ ನೂತನ ಮಾತುಗಳಿವು.
ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಪ್ರವೀಣ್ ಅವರ ಪತ್ನಿ ನೂತನ ಅವರು, ತನ್ನ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
ನನ್ನ ಪತಿಯನ್ನು ಹತ್ಯೆ ಮಾಡಿದವರಿಗೆ ಮತ್ತು ಅವರಿಗೆ ಸಪೋರ್ಟ್ ಆಗಿ ಯಾವ ಸಂಘಟನೆಯವರು ಇದರಲ್ಲಿ ಇದ್ದಾರೋ ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಇಲ್ಲದಿದ್ರೆ ಅವರನ್ನು ಎನ್‌ಕೌಂಟರ್ ಮಾಡಿದ್ರೂ ನನಗೆ ತೃಪ್ತಿ ಮತ್ತು ನನ್ನ ಗಂಡನ ಆತ್ಮಕ್ಕೆ ಶಾಂತಿ.ಯಾಕಂದ್ರೆ, ಇನ್ನು ಯಾರಿಗೂ ಹಾಗೆ ಆಗ್ಬಾರ್ದು ಸರ್, ಎಷ್ಟೋ ಕಾರ್ಯಕರ್ತರಿದ್ದಾರೆ, ನಿನ್ನೆ ನೀವು ನೋಡಿರ್ಬಹುದು. ನನ್ನ ಗಂಡನ ಸಾವಿಗೆ ಮರುಗಿ ಎಷ್ಟು ಜನ ಯುವಕರು ಬಂದು ಅತ್ರು, ಹೋರಾಡಿದ್ರು? ಅಷ್ಟೇ ಯುವಕರು ಪ್ರತೀ ಸಲ ಪಕ್ಷದ ಹಿಂದೆ ಇದ್ದಾರೆ, ಆದ್ರೆ ಅವರಿಗೆ ರಕ್ಷಣೆ ಇಲ್ಲ ಸರ್.ಅವರಿಗೆ ರಕ್ಷಣೆ ಇದ್ರೆ ಇನ್ನೂ ಮುಂದೆ ಹೋಗ್ತಾರೆ, ಯಾಕಂದ್ರೆ ಅಷ್ಟು ಹೋರಾಡಿದವರು ಅವರು..’ ಎಂದು ಹೇಳಿದ ನೂತನ ಅವರ ಈ ದುಃಖಭರಿತ ಮಾತುಗಳನ್ನು ಮೌನದಿಂದಲೇ ಮುಖ್ಯಮಂತ್ರಿಯವರು ಆಲಿಸಿದರು.ಮಾತು ಮುಂದುವರಿಸಿದ ನೂತನ ಅವರು, ನಾನು ಪ್ರತೀದಿನ ಅವರೊಟ್ಟಿಗೆ ಇರ್ತಿದ್ದೆ ಸರ್, ಅವರ ಶಾಪ್‌ನಿಂದ ನಾನೂ ಅವರು ಒಟ್ಟಿಗೇ ಬರುವುದು, ಆದ್ರೆ ಕೊಲೆ ಆದ ದಿನ ನಾನು ಇರ್ಲಿಲ್ಲ, ನನ್ನ ಅಮ್ಮನ ಮನೆಯಲ್ಲಿ ಒಂದು ಕಾರ್ಯಕ್ರಮ ಇದ್ದ ಕಾರಣ ನಾನು ಅಲ್ಲಿಗೆ ಹೋಗಿದ್ದೆ, ಅಂದ್ರೆ ಅವರು ನನ್ನನ್ನು ಕಳಿಸಿದ್ರು, ನಾನು ಮತ್ತೆ ಬರ್ತೇನೆ ಅಂತ ಹೇಳಿದ್ರು.ಆದ್ರೆ ಆ ಹೊತ್ತಿಗೆ ಹೀಗೆ ಆಗಿದೆ.ನಾನು ಜೊತೆಗಿದ್ರೆ ನಾವಿಬ್ಬರೂ ಒಟ್ಟಿಗೆ ಹೋಗ್ತಿದ್ದೆವು, ಇಲ್ಲ ಅವರ ಜೀವ ಉಳೀತಿತ್ತು’ ಎಂದು ಮುಖ್ಯಮಂತ್ರಿಯವರ ಎದುರು ಕಣ್ಣೀರಾದರು.
ನೂತನ ಅವರು ಮುಖ್ಯಮಂತ್ರಿಯವರ ಜೊತೆಯಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ವಿಡಿಯೋ ಸುದ್ದಿ ನ್ಯೂಸ್ ಪುತ್ತೂರು ಲೈವ್ ಯೂ ಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.