ಸಿದ್ಧಕಟ್ಟೆಯ ಪಿಂಕಿ ಟವರ್ ನಲ್ಲಿ ಮಹಿಳಾ ದಿನಾಚರಣೆ, ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭ

0

ಬಂಟ್ವಾಳ : ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ರೋಟರಿ ಲೊರೆಟ್ಟೋ ಹಿಲ್ಸ್, ರೋಟರಿ ಮೊಡಂಕಾಪು, ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ, ಕೆ.ಪಿ.ಟಿ ಮಂಗಳೂರು, ಸಿ.ಸಿ.ಟೆ.ಕ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪಿಂಕಿ ಟವರ್ ಸಿದ್ಧಕಟ್ಟೆಯಲ್ಲಿ ಮಹಿಳಾ ದಿನಾಚರಣೆ, ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭ ಹಾಗೂ ತೆರೆಮರೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಉಷಾ ಕಾಮತ್ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಳೆದ ನಾಲ್ಕು ತಿಂಗಳುಗಳಿಂದ ಸಿದ್ಧಕಟ್ಟೆ ಪರಿಸರದ ಮಹಿಳೆಯರ ಸಬಲೀಕರಣಕ್ಕೆ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸಲು ಆರಂಭಿಸಿದ್ದ ಉಚಿತ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸ್ಥಳೀಯ ಪರಿಸರದ ತೆರೆಮರೆಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಪ್ರಸೂತಿ ತಜ್ಞೆ ಬೆನೆಡಿಕ್ಟ್ ಡಿಕೋಸ್ತ, ನಾಟಿ ವೈದ್ಯರಾದ ಮುತ್ತು ದೇವಾಡಿಗ, ಅಂಗನವಾಡಿ ಕಾರ್ಯಕರ್ತೆಯಾದ ಮೇರಿ ಎಲ್ವೀರಾ ಫಲೇರ, ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಪ್ರಶಸ್ತಿ ವಿಜೇತರಾದ ಸರಕಾರಿ ಪ್ರೌಢ ಶಾಲೆ ಸಿದ್ಧಕಟ್ಟೆಯ ಲಿಕಿತ, ಟೈಲರಿಂಗ್ ತರಬೇತುದಾರರಾದ ಪ್ರೇಮ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ರೋಟರಿ ಝೋನ್ 4 ರ ಅಸಿಸ್ಟೆಂಟ್ ಗವರ್ನರ್ ಎಲಿಯಾಸ್ ಸ್ಯಾಂಟಿಸ್, ವಲಯ ಸೇನಾನಿ ರಾಘವೇಂದ್ರ ಭಟ್, ಕೆ.ಪಿ.ಟಿ ಪ್ರಾಂಶುಪಾಲರಾದ ಹರೀಶ್ ಶೆಟ್ಟಿ, ಸಿ.ಸಿ.ಟೆ.ಕ್ ಮ್ಯಾನೇಜರ್ ನರಸಿಂಹ ಭಟ್, ಕ್ಲಬ್ ಅಡ್ವೈಸರ್ ಜೆರಾಲ್ಡ್ ಡಿಕೋಸ್ತ, ಸ್ಥಾಪಕಾಧ್ಯಕ್ಷರಾದ ಮೈಕಲ್ ಡಿಕೋಸ್ತ, ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ, ಇನ್ನರ್ ವೀಲ್ ಮೂಡುಬಿದಿರೆ ಅಧ್ಯಕ್ಷರಾದ ರಮ್ಯ ವಿಕಾಸ್ ಜೈನ್, ವಿವಿಧ ಕ್ಲಬ್ ಗಳ ರೋಟರಿ ಸದಸ್ಯರು, ಇನ್ನರ್ ವೀಲ್ ಸದಸ್ಯರು, ಟೈಲರಿಂಗ್ ವಿದ್ಯಾರ್ಥಿಗಳು ವಿಶೇಷ ಆಹ್ವಾನಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಣೇಶ್ ಶೆಟ್ಟಿ ಸ್ವಾಗತಿಸಿ, ರಾಜೇಶ್ ನೆಲ್ಯಾಡಿ ವಂದನಾರ್ಪಣೆಗೈದರು. ಅರುಣಾ ಶೆಟ್ಟಿ, ಅಶ್ವಿನಿ ಶೆಟ್ಟಿ, ಶುಭಲಕ್ಷ್ಮಿ, ವಿಮಲಾ ಮೋಹನ್, ಪ್ರಮೀಳಾ ದುರ್ಗಾದಾಸ್, ಜ್ಯೋತಿ ಪ್ರಶಸ್ತಿ ಪತ್ರ ವಾಚಿಸಿದರು. ಮಂದಾರತಿ ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here