ಬಂಟ್ವಾಳ: ಯುವಕ ಮಂಡಲ ಉಳಿ ಕಕ್ಯೆಪದವು ಹಾಗೂ ಮಹಿಳಾ ಮಂಡಲ ಉಳಿ ಇದರ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಹಾಗೂ ಅಖಂಡ ಭಜನಾ ಕಾರ್ಯಕ್ರಮ ಫೆ.27 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ನಾಯ್ಕ್ , ಯುವಕ ಮಂಡಲ, ಮಹಿಳಾ ಸಂಘಟನೆಗಳು ಜತೆಯಾಗಿ ಕೆಲಸ ಮಾಡಿದರೆ ಯಾವ ರೀತಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದಕ್ಕೆ ಕಕ್ಯೆಪದವು ನೂತನ ಕಟ್ಟಡ ಸಾಕ್ಷಿಯಾಗಿದೆ.ಶಿಸ್ತು ಬದ್ದತೆಗೆ ಹೆಸರು ಪಡೆದ ಈ ಸಂಘಟನೆ ಗ್ರಾಮದ ಜನತೆಗೆ ಇನ್ನಷ್ಟು ಪ್ರಯೋಜನವಾಗಲಿ. ಗ್ರಾಮದ ಜನತೆ ಈ ಕಟ್ಟಡದ ಸದುಪಯೋಗ ಪಡಿಸಿಕೊಳ್ಳಲು ಅವರು ತಿಳಿಸಿದರು.
ಸರಕಾರದ ಯೋಜನೆಗಳನ್ನು ಗ್ರಾಮದ ಕಟ್ಟಕಡೆಯ ಜನರಿಗೆ ತಲುಪಿಸುವ ಕಾರ್ಯವನ್ನು ಕಕ್ಯೆಪದವಿನ ಯುವಕರ ತಂಡ ಮಾಡಿದೆ ಅವರಿಗೆ ಅಭಿನಂದನೆ ತಿಳಿಸಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಉಳಿ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ.ಕಕ್ಯ, ಕಕ್ಯಪದವು ಉಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್, ಕಕ್ಯಪದವು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕಕ್ಯಬೀಡು ಪಂಚದುರ್ಗಾ ಪ್ರೌಢ ಶಾಲಾ ಸಂಚಾಲಕ ದಾಮೋದರ ನಾಯಕ್ ಉಳಿ, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಸುನಂದಾ ಶ್ರೀನಿವಾಸ ಅರ್ಮುಡಾತ್ತಾಯ, ಉಳಿ ಯುವಕ ಮಂಡಲ ಅಧ್ಯಕ್ಷ ಸನತ್ ಯು ಮಹಿಳಾ ಮಂಡಲದ ಅಧ್ಯಕ್ಷೆ ಚಂದ್ರಕಲಾ, ಪ್ರಮುಖರಾದ ಡೀಕಯ್ಯ ಬಂಗೇರ,ಸಂಜೀವ ಪೂಜಾರಿ ಕೋರ್ಯ ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ ವಸಂತ ರಾಮನಗರ ಸ್ವಾಗತಿಸಿ, ಸನತ್ ಕುಮಾರ್ ಧನ್ಯವಾದ ನೀಡಿದರು. ಪ್ರಕಾಶ್ ಕಾರ್ಲ, ಪಾರ್ಶ್ವನಾಥ ಜೈನ್ ಕಾರ್ಯಕ್ರಮ ನಿರೂಪಿಸಿದರು.