ಬಂಟ್ವಾಳ: ರಸ್ತೆ ದಾಟುವಾಗ ವಾಹನ ಡಿಕ್ಕಿ; ವ್ಯಕ್ತಿ ಸ್ಥಿತಿ ಗಂಭೀರ- ಸಂಬಂಧಪಟ್ಟವರು ಸಂಪರ್ಕಿಸುವಂತೆ ಪೊಲೀಸರ ಮನವಿ

0

ಬಂಟ್ವಾಳ  : ಬಂಟ್ವಾಳ ಸಮೀಪದ ಪೊನ್ನೊಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿ.ಮೂಡ ಗ್ರಾಮದ ಪೊನ್ನೊಡಿ ಎಂಬಲ್ಲಿ ಟಾಟ ಇಂಟ್ರಾ ವಾಹನೊಂದು ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ರಸ್ತೆಗೆ ಬಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ವ್ಯಕ್ತಿಯ ವಿವರ ಲಭ್ಯವಾಗಿಲ್ಲ. ಸಂಬಂಧಿಸಿದವರು ಮೆಲ್ಕಾರ್‌ ಟ್ರಾಫಿಲ್‌ ಎಸೈ ಮೂರ್ತಿ ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here