ಹೊಸದಿಲ್ಲಿ :ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಹುದೆಯಿಂದ ವಜಾಗೊಳಿಸದಿದ್ದರೆ ಪ್ರಧಾನಿ ನರೇಂದ್ರ-ಮೋದಿ ರಾಜಿನಾಮೆ ನೀಡಬೇಕಾಗಿ ಬರಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಸಂಸದ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ರಾಸಿಂಗ್ ಒಳಗೊಂಡಂತೆ ಹಲವಾರು ಬಾರಿ ಎಡವಟ್ಟು ಮಾಡಿದ್ದಾರೆ. ಮೋದಿಯವರು ದೋವಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು, ಇಲ್ಲವಾದಲ್ಲಿ 2023 ಮಧ್ಯದ ವೇಳೆ ಮೋದಿ ಕೂಡಾ ರಾಜಿನಾಮೆ ನೀಡಬೇಕಾಗಬಹುದು ಎಂದು ಸ್ವಾಮಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಅಜಿತ್ ದೋವಲ್ ಮಾಡಿಕೊಂಡಿರುವ ಗಂಭೀರ ಯಡವಟ್ಟು ಶೀಘ್ರದಲ್ಲಿಯೇ ವಾಷಿಂಗ್ಟನ್ ಡಿಸಿಯಿಂದ ಹೊರಬೀಳಲಿದೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.