ಬಂಟ್ವಾಳ :ಮಡ೦ತ್ಯಾರ್ ವಿಜಯ ರೈ ಮಾಲಕತ್ವದ ‘ವಿಜಯ ವಸತಿ ಸಂಕೀರ್ಣ ‘ವನ್ನು ಫೆ 1 ರಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ವಿಜಯ ವಸತಿ ಸಂಕೀರ್ಣ ಮಾಲಕ ವಿಜಯ ರೈ ರಾ. ಸ್ವ. ಸಂಘದ ಮೂಲಕ ನಮಗೆ ಸುದಿರ್ಘ ಸಮಯದಿಂದ ಪರಿಚಿತರು, ಗ್ರಾಮಾಂತರ ಪ್ರದೇಶದಲ್ಲಿ ಐದು ಮಹಡಿಯ ಈ ಕಟ್ಟಡ ನಿರ್ಮಾಣ ಒಂದು ಸವಾಲಿನ ಕೆಲಸ. ಅದನ್ನು ವಿಜಯ ರೈ ಸಾಧನೆ ಮಾಡಿದ್ದಾರೆ ಎಂದರು.
ಬೆಳ್ತ೦ಗಡಿ ಶಾಸಕ ಹರೀಶ್ ಪೂ೦ಜ ಮುಖ್ಯ ಅತಿಥಿಯಾಗಿ ಮಾತನಾಡಿ ಮಡ೦ತ್ಯಾರ್ ಪ್ರದೇಶ ಇಂದು ಹೊಸ ವ್ಯವಸ್ಥೆಗಳೊಂದಿಗೆ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ನನ್ನ ಬೆಂಬಲವಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಶುಭ ಹಾರೈಸಿದರು.
ವಸತಿ ಖರೀದಿಸಿದ ಪುನೀತ್ , ರಘು ಭಂಡಾರಿ, ಶಾಂತಿ ಎಲ್, ವಿಜಿತ್ ಸದಾಶಿವ ಹೆಗ್ಡೆ. ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುಲೋಚನಾ ಜಿ.ಕೆ ಭಟ್, ಎಸ್ ಡಿಸಿಸಿ ಬ್ಯಾಂಕ್ ಮೆನೇಜರ್ ಗಾಯತ್ರಿ ಲೋಕೇಶ್ ಮಡಂತ್ಯಾರ್, ಗ್ರಾಪಂ. ಅಧ್ಯಕ್ಷೆ ಶಶಿಪ್ರಭಾ, ಮಾಲಕರ ಮಾತೃಶ್ರೀ ಅಪ್ಪಿ ರೈ ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ಪುಷ್ಪಾನಂದ ಡಾ| ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು. ಸಂಕೀರ್ಣದ ಮಾಲಕ ವಿಜಯ ರೈ ಸ್ವಾಗತಿಸಿ, ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.