ಸರಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕುರಿತು ನಡೆಯುವ ಸರಕಾರದ ವಿನೂತನ ಕಾಯ೯ಕ್ರಮ ‘ಕಲಿಕಾಹಬ್ಬ’ ಕಾಯ೯ಕ್ರಮ ಬಂಟ್ವಾಳ ತಾಲೂಕಿನ ಕಲ್ಲಡ್ಕ ಕ್ಲಸ್ಟರ್ ನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಗೋಳ್ತಮಜಲಿನಲ್ಲಿ ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷ ಸ್ಥಾನವನ್ನು ಗೋಳ್ತಮಜಲು ಪ್ರೌಢ ಶಾಲಾ ಕಾಯಾ೯ಧ್ಯಕ್ಷ ಚಂದ್ರಶೇಖರ್ ಟೈಲರ್ ರವರು ವಹಿಸಿ. ಶಾಲೆಯೆಂಬುದು ಎಲ್ಲಾ ಧಮ೯ದವರಿಗೂ ಸೇರಿದ್ದು ಸಮಾನತೆಗೆ ನಿದಶ೯ನವೇ ಶಾಲೆ ಆಗಿದೆ , ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹೊಸ ಹೊಸ ಕಲಿಕಾ ಕಾಯ೯ಕ್ರಮಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದರು.
ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ದಿನೇಶ್ ಮಕ್ಕಳ ಮನದ ಅರಿ ಷಡ್ವರ್ಗಗಳಾದ ಕಾಮ,ಕ್ರೋಧ,ಲೋಭ, ಮೋಹ,ಮದ,ಮಾತ್ಸರ್ಯ ಗಳ ಸಂಕೇತದ ಬಲೂನುಗಳನ್ನು ಒಡೆಯುವ ಮೂಲಕ ವಿನೂತನವಾಗಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ಗೋಳ್ತಮಜಲು ಪಂಚಾಯತ್ ನ ಸದಸ್ಯರಾದ ನಳಿನಾಕ್ಷಿ, ಸರೋಜಿನಿ, ಪುರುಶೊತ್ತಮ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಮೋನಪ್ಪ ದೇವಸ್ಯ, ಎಸ್ ಡಿ ಎಂ ಸಿ ಪೋಷಕ ಸದಸ್ಯ ನಾಗೇಶ್ ಪೂಜಾರಿ, ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ಉಪಸ್ಥಿತರಿದ್ದರು. ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಯವರು ಕಾಯ೯ಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್, ಸೌಮ್ಯಲತಾ ರಾವ್, ಸತ್ಯಶಂಕರ್, ಶಂಕರ್, ಉಷಾ ಸುವಣ೯ ಭಾಗವಹಿಸಿದ್ದರು
ಕಲಿಕಾ ಹಬ್ಬದ ನಾಲ್ಕು ಚಟುವಟಿಕೆಗಳಾದ. ಆಡು- ಹಾಡು, ಕಾಗದ -ಕತ್ತರಿ, ಊರು ಸುತ್ತೋಣ, ಮಾಡು -ಹಾಡು ಗಳಲ್ಲಿ ಗೋಳ್ತಮಜಲು ಪ್ರಾಥಮಿಕ ಶಾಲೆ, ಗೋಳ್ತಮಜಲ ಪ್ರೌಢಶಾಲೆ, ಕೆಲಿಂಜ, ಮಜಿ, ನೆಟ್ಲ, ಕಲ್ಲಡ್ಕ ಮಾದರಿ ಶಾಲೆ, ಬಾಯಿಲ, ಬೋಳಂತೂರು ಶಾಲೆಗಳ ಸುಮಾರು 120 ವಿಧ್ಯಾರ್ಥಿಗಳು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಗೋಳ್ತಮಜಲು ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿದ್ಯಾಲತ ಸ್ವಾಗತಿಸಿ, ಸಹ ಶಿಕ್ಷಕಿ ಸುಜಾತ ಧನ್ಯವಾದ ನೀಡಿದರು. ಸಹಶಿಕ್ಷಕ ಶಂಕರ್ ಪಾವಸ್ಕರ್ ಕಾಯ೯ಕ್ರಮ ನಿರೂಪಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಾಲಾ ಶಿಕ್ಷಕರು ಹಾಗೂ ಪೋಷಕರು ಸಹಕರಿಸಿದರು.