ಬಂಟ್ವಾಳ: ಬಂಟ್ವಾಳ ಬಿಜೆಪಿಯ ಕಾರ್ಯಕರ್ತರು, ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸದಿಂದ ಈ ಬಾರಿಯ ಪಾದಯಾತ್ರೆ ಸಾರ್ಥಕತೆಯನ್ನು ತಂದುಕೊಟ್ಟಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ನಡಿಗೆ- ಗ್ರಾಮದೆಡೆಗೆ ಶಾಸಕರ ನಡಿಯ 11 ನೇ ದಿನದ ಪಾದಯಾತ್ರೆಯ ಬಳಿಕ ಕುರಿಯಾಳ ದುರ್ಗಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ಹಿರಿಯರು ಯಾವುದೇ ಅಧಿಕಾರದ ಆಸೆಗಳಿಲ್ಲದೆ ಪಕ್ಷ ಕಟ್ಟುವ ಕಾರ್ಯ ಮಾಡಿದ್ದು, ಈಗ ಅವರಲ್ಲಿ ಸಾರ್ಥಕತೆ ಮೂಡಿದೆ. ಜನರು ನೀಡಿದ ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮಾಡೋಣ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸ್ವಾತಂತ್ರ್ಯ ಕಾಲಘಟ್ಟದ ಕಾಂಗ್ರೆಸ್ ಗೂ ಈಗಿನ ಕಾಂಗ್ರೆಸ್ ಗೆ ಸಾಕಷ್ಟು ವ್ಯತ್ಯಾಸವಿದ್ದು, ಈಗ ನಕಲಿ ಕಾಂಗ್ರೆಸ್ ಅಸ್ತಿತ್ವದಲ್ಲಿದೆ. ಕುರಿಯಾಳ ಬೂತ್ ಗಳನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ಶಾಸಕ ರಾಜೇಶ್ ನಾಯ್ಕ್ ಅನುದಾನ ನೀಡಿರುವುದು ಸಾರ್ಥಕವಾಗುತ್ತದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನೀಲ್ ಕಾಯರ್ ಮಾರ್, ಯಾತ್ರೆಯ ಸಹಸಂಚಾಲಕ ಮಾಧವ ಮಾವೆ, ಸುದರ್ಶನ್ ಬಜ, ಗ್ರಾ.ಪಂ.ಸದಸ್ಯರಾದ ಯಶೋಧ, ಅಶ್ವಿನಿ ಶೆಟ್ಟಿ, ಶ್ರೀದೇವಿ, ಸುಹಾಸಿನಿ, ಬೂತ್ ಅಧ್ಯಕ್ಷ ಪ್ರದೀಪ್ ಮಾರ್ಲ ಕುಟಿಲ, ಸುರೇಂದ್ರ ಶೆಟ್ಟಿ ಪಾಪುದಡ್ಕ, ಸಹಸಂಚಾಲಕ ರೂಪೇಶ್ ಕುಟಿಲ ಉಪಸ್ಥಿತರಿದ್ದರು.
ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಕ್ಷೇತ್ರದ ಅನುದಾನ, ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ಕುರಿಯಾಳ ಶಕ್ತಿಕೇಂದ್ರದ ಸಂಚಾಲಕ ಹರೀಶ್ ಶೆಟ್ಟಿ ಪಡು ಸ್ವಾಗತಿಸಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.