ಮಾಣಿ: ಆಟೋ ರಿಕ್ಷಾ ಒಂದಕ್ಕೆ ಹಿಂದಿನಿಂದ ಬಂದ ಲಾರಿವೊಂದು ಡಿಕ್ಕಿ ಹೊಡೆದ ಘಟನೆ ಜು.23 ರಂದು ಮಾಣಿ ಮೈಸೂರು ಹೆದ್ದಾರಿಯ ಮಾಣಿ ಸಮೀಪದ ಸೂರಿಕುಮೇರು ಬಳಿ ನಡೆದಿದೆ.
ಮಾಣಿಯಿಂದ ಕಲ್ಲಡ್ಕ ಕಡೆಗೆ ಆಟೋ ರಿಕ್ಷಾ ತೆರಳುತ್ತಿದ್ದಾಗ ಹಿಂಭಾಗದಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದು ಬಳಿಮ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅಲ್ಪ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.