ಸಂಸ್ಕಾರ ಸಹಕಾರ ಸಂಘಟನೆ ಸಮೃದ್ಧಿಯಿಂದ ಮನ ಮನೆ ಬೆಳಗಲು ಸಾಧ್ಯ: ಒಡಿಯೂರು ಶ್ರೀ
ವಿಟ್ಲ : ಒಡಿಯೂರು ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಾಯೋಜಿತ ಕೇೂಂಗ್ರಬೆಟ್ಟು, ನಾವೂರ, ಮಂಡಾಡಿ ಘಟ ಸಮಿತಿ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ನಾವೂರಿನಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಆಶೀರ್ವಚನ ನೀಡಿ ಸಂಸ್ಕಾರ ಸಹಕಾರ ಸಂಘಟನೆ ಸಮೃದ್ಧಿಯಿಂದ ಪ್ರತಿ ಮನ ಮನೆಯು ಬೆಳಗಲು ಸಾಧ್ಯ. ನೆಮ್ಮದಿಯ ಜೀವನಕ್ಕೆ ಸಂಸ್ಕಾರವಿದ್ದರೆ ಪ್ರೀತಿಯಿಂದ ಬದುಕಲು ಸಂಘಟನೆ ಒಂದು ಅಡಿಪಾಯ ಎಂದರು. ಕಾರ್ಯಕ್ರಮದಲ್ಲಿ ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಮೇಲ್ವಿಚಾರಕರಾದ ಯಶೋಧರ ಸಾಲಿಯಾನ್, ಕೇೂಂಗ್ರಬೆಟ್ಟು ಘಟ ಸಮಿತಿ ಅಧ್ಯಕ್ಷರಾದ ಗೀತಾ, ಮಂಡಾಡಿ ಘಟ ಸಮಿತಿಯ ಅಧ್ಯಕ್ಷರಾದ ಗೀತಾ ಉಪಸ್ಥಿತರಿದ್ದರು. ಕೇೂಂಗ್ರಬೆಟ್ಟು ಘಟ ಸಮಿತಿ ಉಪಾಧ್ಯಕ್ಷರಾದ ಮಂಜುನಾಥ್ ಕುಲಾಲ್ ಸ್ವಾಗತಿಸಿ, ಜಗನ್ನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಭಾರತಿ ಪಣೆಕಲ ವಂದಿಸಿದರು.