ಫರಂಗಿಪೇಟೆ: ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣದ ಶಿಲಾನ್ಯಾಸ ಸಮಾರಂಭ

0

ಬಂಟ್ವಾಳ :ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಆಶ್ರಯದಲ್ಲಿ ಶ್ರೀ ಆಂಜನೇಯ ದೇವರ ಭವ್ಯ ದೇಗುಲ ನಿರ್ಮಾಣ ಸಂಕಲ್ಪದೊಂದಿಗೆ, ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ ಇವರ ಮಾರ್ಗದರ್ಶನದಲ್ಲಿ ಮುರಳಿ ಭಟ್ ಕಲ್ಲತಡಮೆ ಇವರ ಪೌರೋಹಿತ್ಯದಲ್ಲಿ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದರು ಶ್ರೀ ಅದಮಾರು ಮಠ ಉಡುಪಿ ಇವರ ಅಮೃತ ಹಸ್ತದಲ್ಲಿ ದೇವಾಲಯದ ಶಿಲಾನ್ಯಾಸ ಸಮಾರಂಭವು ಡಿ 25 ರಂದು ನಡೆಯಿತು.

ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅದಮಾರು ಮಠದ ಪೂಜ್ಯ ಶ್ರೀ ಈಶಪ್ರಿಯ ಸ್ವಾಮೀಜಿಯವರು,
ಉತ್ತಮ ಆಚಾರ ವಿಚಾರಗಳನ್ನು ಪಾಲಿಸುವುದು ದೇವರ ಪೂಜೆಗೆ ಸಮಾನ,ದೇಗುಲಗಳಲ್ಲಿ ಜನ ಸಮೂಹದ ಪ್ರಾರ್ಥನೆಯಿಂದ ಸಾನಿಧ್ಯ ವೃದ್ಧಿಯಾಗುತ್ತದೆ, ಮುಂದಿನ ದಿನಗಳ್ಳಲ್ಲಿ ಈ ಕ್ಷೇತ್ರದಲ್ಲಿ ನಿರಂತರ ಭಜನೆ,ಜಪ, ಭಾಗವತ ಅಧ್ಯಯನ ನಡೆಯಲಿ, ಹಿಂದೂ ಸಮಾಜದ ಶಕ್ತಿ ಕೇಂದ್ರ ವಾಗಿ ವ್ಯಕ್ತಿಯ ಸೂಕ್ತ ಭಾವ ಜಾಗೃತ ವಾಗಲು ದೇಗುಲ ಸಹಕರಿಯಾಗಲಿ, ಹಿಂದೂ ಸಮಾಜದ ಸಾಧನ ರೂಪವಾಗಿ ದೇವಸ್ಥಾನ ಬೆಳಗಲಿ ಎಂದು ಆಶೀರ್ವಚನವಿತ್ತರು.

ಪೊಳಲಿ ತಪೋವನದ ವಿವೇಕ ಚೈತನ್ಯ ಸ್ವಾಮೀಜಿ ದೀಪ ಬೆಳಗಿಸಿ ಸಭಾ ಕಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಮನಸ್ವಿನಿ ಆಸ್ಪತ್ರೆ ಅರ್ಕುಳ ಇದರ ಡಾ.ರವೀಶ್ ತುಂಗ,ಉಳ್ಳಾಕ್ಲು ಮಗ್ರಂತಾಯಿ ಕ್ಷೇತ್ರದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ,ಉದ್ಯಮಿ ರಘು ಸಪಲ್ಯ ಮೊಗರ್ನಾಡು, ಇಂಡೇನ್ ಗ್ಯಾಸ್ ಮಾಲಕರದ ಜಗನ್ನಾಥ್ ಚೌಟ,ಡಾ ಅನಂತ ರಾಮ ಶೆಟ್ಟಿ, ಅರ್ಚಕ ಮುರಳಿ ಭಟ್ ಕಲ್ಲತಡಮೆ, ಆಂಜನೇಯ ಶ್ರೀ ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಧ್ಯಕ್ಷರಾದ ಐತಪ್ಪ ಆಳ್ವ ಸುಜಿರುಗುತ್ತು, ಕಾರ್ಯಧ್ಯಕ್ಷರಾದ ಮಹಾಬಲ ಕೊಟ್ಟಾರಿ ಮುನ್ನೂರು. ಅಧ್ಯಕ್ಷರಾದ ಅಜಿತ್ ಚೌಟ ದೇವಸ್ಯ,ಸಂಚಾಲಕರಾದ ಕೆ ಜಿ ವಿಠ್ಠಲ್ ಆಳ್ವ, ಆಡಳಿತ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗಾಂಭೀರ ಸುಜಿರುಗುತ್ತು, ಶ್ರೀರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷರಾದ ಅನಿಲ್ ಪಂಡಿತ್, ಶ್ರೀ ಆಂಜನಾದೇವಿ ಮಾತೃ ಮಂಡಳಿಯ ಸಂಚಾಲಕರುಗಳಾದ ಜಯಶ್ರೀ ಕರ್ಕೇರ ಮತ್ತು ಶೈಲಜಾ ಪಿ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು,ಧಾನ್ಯ ಭಟ್ ಪ್ರಾರ್ಥಿಸಿದರು,ಆಡಳಿತ ಮಂಡಳಿಯ ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ ಅರ್ಕುಳ ವಂದಿಸಿದರು, ಆಂಜನಾದೇವಿ ಮಾತೃ ಮಂಡಳಿಯ ಅಧ್ಯಕ್ಷರಾದ ಕವಿತಾ ದೇವದಾಸ ಅರ್ಕುಳ ಕಾರ್ಯಕ್ರಮ ನಿರೂಸಿದರು.

LEAVE A REPLY

Please enter your comment!
Please enter your name here