ಬಂಟ್ವಾಳ: ಸಹಕಾರಿ ಸಂಸ್ಥೆಗಳು ಹಣಕಾಸು ವ್ಯವಹಾರದ ಜೊತೆಗೆ ಪಾರಂಪರಿಕ ಕೃಷಿ ಪೂರಕ ವ್ಯವಸ್ಥೆಗೂ ಕೈಜೋಡಿಸಬೇಕು ಎಂದು ಕೊಡ್ಮಣ್ ಬ್ರಹ್ಮಗಿರಿ ಶ್ರೀ ರಾಧಾ ಸುರಭಿ ಗೋ ಮಂದಿರದ ಶ್ರೀ ಭಕ್ತಿ ಭೂಷಣ್ ದಾಸ್ ಪ್ರಭೂಜೀ ಹೇಳಿದರು.
ಅವರು ಡಿ. 10ರಂದು ಕುರಿಯಾಳ ಗ್ರಾಮದ ಕುಕ್ಕುರಿಯಲ್ಲಿ ನಾರಾಯಣ ಬಂಗೇರ ಕಟ್ಟಡದಲ್ಲಿ ಬೆಂಜನಪದವು ವಿವಿಧೋದ್ದೇಶ ಸಹಕಾರ ಸಂಘ ದ್ವಿತೀಯ ಶಾಖೆ ಉದ್ಘಾಟಿಸಿ ಮಾತನಾಡಿದರು.
ನೆಲ ಜಲ ವನ ಪಶು ಸಂಪತ್ತು ಸಂಕರಣವಾಗದೆ ನೈಜತೆ ಉಳಿಸಿಕೊಳ್ಳಲು ಸಹಕಾರ ಪದ್ಧತಿಯಲ್ಲಿ ಬೀಜ ಬ್ಯಾಂಕ್ ನಿರ್ಮಾಣ ಆಗಬೇಕು ಎಂದರು.
ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಿ ಎಂ. ಸಭೆಯ ಅಧ್ಯಕ್ಷತೆ ವಹಿಸಿ ಸ್ಥಳೀಯರು ಸಂಘದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಶಾಖೆಯನ್ನು ಬೆಳೆಸಲು ತಿಳಿಸಿದರು.
ಬೊಲ್ಪು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ರಾಜಾ ಬಂಟ್ವಾಳ್, ಲೊರೆಟ್ಟೊ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೊಯ್ ಕಾರ್ಲೊ, ಬಿ. ಸಿ. ರೋಡ್ ಫೆಡರಲ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ರೋಶನ್ ಸ್ಟೀವನ್ ಪಿರೇರಾ ಶುಭ ಹಾರೈಸಿದರು.
ಕುರಿಯಾಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ಪಿಂಟೊ, ಸಹಕಾರಿಯ ಉಪಾಧ್ಯಕ್ಷೆ ಸಿಲ್ವಿಯಾ ಡಿಕ್ರೂಜ್,. ನಿರ್ದೇಶಕರಾದ ಶಾಂತಿ ರೊಡ್ರಿಗಸ್, ಸುನಿತಾ ರೊಡ್ರಿಗಸ್, ಪುಷ್ಪ, ಲೀಲಾವತಿ, ಚಂದ್ರಾವತಿ, ಸಿಬಂದಿಗಳು ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿ, ಶಾಖಾಧಿಕಾರಿ ಲೆನಿಟಾ ವಂದಿಸಿದರು. ಎಡ್ವಿನ್ ಪಸನ್ನ ಕಾರ್ಯಕ್ರಮ ನಿರ್ವಹಿಸಿದರು.