ಬಂಟ್ವಾಳ: ರಾಷ್ಟ್ರವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿ ಆಗುವುದಕ್ಕಾಗಿ ಪ್ರಸ್ತುತ ಕೃಷಿ ಉತ್ವನ್ನದ ಎರಡು ಪಟ್ಟು ಬೆಳೆ ಉತ್ಪನ್ನ ತೆಗೆಯುವುದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಕೃಷಿ ಯಂತ್ರೋಪಕರಣ ಬಳಕೆಯಿಂದ ಈ ಸಾಧನೆ ಮಾಡಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಡಿ. 6 ರಂದು ಬಿ.ಮೂಡ ಗ್ರಾಮದ ಬಿ.ಸಿ.ರೋಡ್ ಮಯ್ಯರ ಬೈಲು ಬಾಳೆಹಿತ್ಲು ಪ್ರದೇಶದಲ್ಲಿ ಭತ್ತ ಕೃಷಿ ಯಂತ್ರ ನಾಟಿಗೆ ಚಾಲನೆ ನೀಡಿ ಮಾತನಾಡಿದರು.
ಬಂಜರು ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಪದ್ಧತಿಯು ವರ್ಷದಿಂದ ವರ್ಷಕ್ಕೆ ಆಸಕ್ತ ರೈತರಿಂದ ಪ್ರಗತಿಯಲ್ಲಿದ್ದು ಮುಂದಕ್ಕೆ ಕೃಷಿ ಇನ್ನಷ್ಟು ಪ್ರಗತಿ ಯಾಗುವ ಮೂಲಕ ದೇಶದ ಆಹಾರ ಉತ್ಪಾದನೆಯಲ್ಲಿ ಸ್ವಾಲಂಬಿಗಳಾಗಬೇಕು ಎಂದರು.
ಸಭೆಯನ್ನು ಉದ್ದೇಶಿ ತೋಟಗಾರಿಕಾ ಸಹಾಯಕ ಅಧಿಕಾರಿ ಹರೀಶ್ ಬಂಗೇರ, ವಿಟ್ಲ ಸಿ.ಪಿ.ಸಿ.ಆರ್.ಐ ಕೃಷಿ ವಿಸ್ತರಣಾ ವಿಭಾಗದ ತಾಂತ್ರಿಕ ಅಧಿಕಾರಿ ಪುರಂದರ ಸಿ. ಕೂಟೇಲು, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೊರಗಪ್ಪ ಮಾತನಾಡಿದರು. .
ಬಂಜರು ಭೂಮಿ ಭತ್ತದ ಕೃಷಿ ಯೋಜನೆಯ ರೂವಾರಿ ಕರುಣೇಂದ್ರ ಪೂಜಾರಿ ಕೊಂಬರಬೈಲು ಅವರನ್ನು ಶಾಸಕರು ಅಭಿನಂದಿಸಿದರು.
ವೇದಿಕೆಯಲ್ಲಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಆರ್. , ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪಿ. ಜಯಾನಂದ, ಪ್ರಗತಿಪರ ಕೃಷಿಕರಾದ ಪದ್ಮನಾಭ ಕೆಲ್ದೋಡಿಗುತ್ತು, ಕೃಷ್ಣರಾಜ ಜೈನ್ ಪಂಜಿಕಲ್ಲು, ವೆಂಕಟರಾವ್ ಬಾಳೆಹಿತ್ಲು, ಪುರುಷೋತ್ತಮ ಬಾಳೆಹಿತ್ಲು, ಕೆ. ಎನ್. ಶೇಖರ್ ಕೆಳಗಿನ ಪಂಜಿಕಲ್ ಗುತ್ತು, ನಾಗೇಶ್ ಕುಲಾಲ್ ಬಾಳೆಹಿತ್ಲು, ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ವಾಸು ಮೂಲ್ಯ ಬಾಳೆಹಿತ್ಲು ಮತ್ತು ಕೃಷಿ ನಾಟಿ ಯಂತ್ರದ ನಿರ್ವಹಕ ಶ್ರೀಪತಿ ಗೌಡ ಅವರನ್ನು ಸಮ್ಮಾನಿಸಲಾಯಿತು.
ಬೊಲ್ಪು ರೈ.ಉ.ಕ. ನಿರ್ದೇಶಕ ದೇವಪ್ಪ ಕುಲಾಲ್ ಪಂಜಿಕಲ್ ಸ್ವಾಗತಿಸಿದರು. ಕೃಷಿ ಅಧಿಕಾರಿ ನಂದನ್ ಶೆಣೈ ಪ್ರಸಾವನೆ ನೀಡಿದರು, ಬೊಲ್ಪು ರೈತ ಉತ್ವಾದಕರ ಕಂಪೆನಿ ಅಧ್ಯಕ್ಷ ರಾಜಾ ಬಂಟ್ವಾಳ್ ವಂದಿಸಿದರು,
ಸಹಾಯಕ ಕೃಷಿ ಅಧಿಕಾರಿ ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.