ನೇರಳಕಟ್ಟೆ ಶ್ರೀ ಗಣೇಶ ಸಭಾಭವನದಲ್ಲಿ ಡಿ.5 ರಂದು ಹತ್ತು ದಿನಗಳ ಕಾಲ ಯೋಗ ಶಿಬಿರವನ್ನು ಅಯ್ಯಪ್ಪ ಗುರುಸ್ವಾಮಿ ಹರೀಶ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭಹಾರೈಸಿದರು. ಯೋಗ ಗುರುಗಳಾದ ವಾರಣಾಶಿ ಶ್ರೀ ಪ್ರಕಾಶಾನಂದ ಗುರೂಜಿಯವರು ದಿನನಿತ್ಯ ಮಾಡಬೇಕಾದ ಪ್ರಾರ್ಥನೆ, ಯೋಗಾಸನ, ಪ್ರಾಣಾಯಾಮ , ಧ್ಯಾನ ವಿಧಾನವನ್ನು ಕಲಿಸಿಕೊಡಲಿದ್ದಾರೆ.
:ಶಿಬಿರದ ಸಂಯೋಜಕರಾದ ವಿಶು ಕುಮಾರ್ ನೇರಳಕೆಟ್ಟೆ , ಶಾರೀರಿಕ ಶಿಕ್ಷಕ ದಿನಕರ ಮಾಣಿ, ನಾಗೇಶ ಕೊಂಕಣ ಪದವು, ಕರುಣಾಕರ ಕೆ. , ಉಮೇಶ ಎಸ್ ಪಿ, ಯಶೋಧರ ಆಚಾರ್ಯ ಬೊಳ್ಳುಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.