ವಿಟ್ಲ: ಪಟ್ಟಣ ಪಂಚಾಯತ್ ಉದ್ಯೋಗಿಯೋರ್ವರು ನೀಡಿರುವ, ಜಾತಿ ನಿಂಧನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲರವರನ್ನು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಯವರು ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಚಂದಳಿಕೆ ಜನತಾ ಕಾಲೊನಿ ನಿವಾಸಿ, ವೆಂಕಪ್ಪ ನಾಯ್ಕ್‌ರವರ ಪುತ್ರ, ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ವಾಲ್‌ಮ್ಯಾನ ಆಗಿ ಕೆಲಸ ಮಾಡಿಕೊಂಡಿದ್ದ ರಾಜೇಶ್‌ರವರು ದೂರುದಾರರಾಗಿದ್ದಾರೆ.
ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣರವರ ವಿರುದ್ಧ ದೂರು ನೀಡಿದ್ದರು. 2022 ಜ.19ರಂದು ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಈ ಘಟನೆ ನಡೆದಿತ್ತು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶ್ರೀಕೃಷ್ಣರವರು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದೆಲ್ಲ ಹೇಳಿ ಬೆದರಿಸಿರುತ್ತಾರೆ ಎಂದು ಆರೋಪಿಸಿ ರಾಜೇಶ್‌ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ನಿರ್ದೋಷಿ ಎಂದು ತೀರ್ಪು ನೀಡಿದೆ. ಶ್ರೀಕೃಷ್ಣ ವಿಟ್ಲರವರ ಪರವಾಗಿ ಮಂಗಳೂರಿನ ವಕೀಲ ಜಗದೀಶ್ ಕೆ.ಆರ್. ರವರು ವಾದಿಸಿದ್ದರು.