ಬಂಟ್ವಾಳ: ಜೆಸಿಐ ಅಧ್ಯಕ್ಷರಾಗಿ ರಾಜೇಂದ್ರ ಆಯ್ಕೆ

0

ಬಂಟ್ವಾಳ : ಬಿ.ಸಿ ರೋಡಿನ ವರ್ಣ ಸ್ಟುಡಿಯೋ ಮಾಲಕ, ಛಾಯಗ್ರಾಹಕ, ರಾಜೇಂದ್ರ ಅವರು 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.


ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಷನ್‌ ರೈ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಅದರಂತೆ ನೂತನ ಕಾರ್ಯದರ್ಶಿಯಾಗಿ ರಶ್ಮಿ ವಚನ್‌ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್‌ ಹಾಗೂ ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಗಣೇಶ್‌ ಕುಲಾಲ್‌, ಕಿರಣ್‌, ಮನೋಜ್‌ ಕನಪಾಡಿ, ವಚನ್‌ ಶೆಟ್ಟಿ, ಕಿಶೋರ್‌ ಆಚಾರ್ಯ, ವಿದ್ಯಾ ಉಮೇಶ್‌, ಜೆಜೆಸಿ ಸಂಯೋಜಕರಾಗಿ ಲೋಕೇಶ್‌ ಸುವರ್ಣ, ಮಹಿಳಾ ಜೆಸಿ ಸಂಯೋಜಕಿಯಾಗಿ ದೀಪ್ತಿ ರೋಶನ್‌ ರೈ, ಜೆಜೆಸಿ ಅಧ್ಯಕ್ಷರಾಗಿ ಜಯರಾಜ್‌ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here