ಓಜಾಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಜಾಲ ಇಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು.ಸದಸ್ಯರು ಹಾಗೂ ಶಿಕ್ಷಕರು ಸೇರಿ ಮಕ್ಕಳನ್ನು ಅಡಿಕೆ ಮರದ ಹಾಳೆಯಲ್ಲಿ ಕೂರಿಸಿ ಎಳೆಯುವ ಆಟದೊಂದಿಗೆ ಈ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಏಳನೇ ತರಗತಿಯ ಸಹದಿಯ,ಮುಖ್ಯ ಅತಿಥಿಯಾಗಿ ಆರನೇ ತರಗತಿಯ ಮನೀಶ್,ಲಿತಿಕಾ ಐದನೇ,ಧನ್ವಿತ್ ನಾಲ್ಕನೇ,ಹವೀಸ ಜಿ ಮೂರನೇ,ಹಾಸಿಂ ಎರಡನೇ, ನಿಶ್ಮಿತಾ ಒಂದನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.
ಪ್ರಥಮ್, ಹೃಷಿಕ,ಸಿಂಚನಾ ಕೆ,ಲಿಖೇಶ್, ಹರ್ಷಿಣಿ ಮಕ್ಕಳ ದಿನಾಚರಣೆಯ ಬಗ್ಗೆ ಭಾಷಣವನ್ನು ಮಾಡಿದರು.ಶ್ರುತಿಕಾ ಇವರು ಮಕ್ಕಳ ದಿನಾಚರಣೆ ಬಗ್ಗೆ ತಾನೇ ಬರೆದ ಕವನವನ್ನು ವಾಚಿಸಿದರು.


ಈ ದಿನ ಮಕ್ಕಳಿಗೆ ಬಲೂನು ಒಡೆಯುವುದು, ಬಿಸ್ಕೆಟ್ ತೂತು ಮಾಡುವುದು, ಬಾಯಿಂದ ಚಾಕಲೇಟ್ ಹಿಕ್ಕಿ ಗ್ಲಾಸಿಗೆ ಹಾಕುವುದು, ಕ್ಯಾಂಡಲ್ ಉರಿಸುವುದು,ಬಲೂನು ಊದಿ ದೊಡ್ಡದು ಮಾಡುವುದು, ತೆಂಗಿನಕಾಯಿಯನ್ನು ಕಾಲಿನ ಒಳಗಿನಿಂದ ಪಾಸ್ ಮಾಡುವುದು ಮುಂತಾದ ತಮಾಷೆಯ ಆಟಗಳನ್ನು ಅಡಿಸಲಾಯಿತು. ಶಾಲೆಯ ಎಲ್ಲ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.ಮಕ್ಕಳು ಖುಷಿಯಿಂದ ಮಕ್ಕಳ ದಿನಾಚರಣೆ ಯನ್ನು ಸಂಭ್ರಮಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಸಂಜೀವ ಮಿತ್ತಳಿಕೆ, ಸಹ ಶಿಕ್ಷಕರಾದ ವಿಲ್ಮಾ ಸೀಕ್ವೆರಾ ಜೆಸಿಂತಾ ಲೋಬೊ, ಅತಿಥಿ ಶಿಕ್ಷಕರಾದ ಚಿತ್ರಲೇಖಾ ಹಾಗೂ ನವ್ಯಶ್ರೀ
ವಿವಿಧ ಸ್ಪರ್ಧೆಗಳನ್ನು ನಡೆಸುವಲ್ಲಿ ಸಹಕರಿಸಿದರು ಅಡುಗೆ ಸಿಬ್ಬಂದಿಯವರದ ಕುಸುಮ , ಹರಿಣಾಕ್ಷಿ,ವನಿತಾ ಸಹಕರಿಸಿದರು. ಶಾಲಾ ವಿದ್ಯಾರ್ಥಿ ನಾಯಕ ರಜತ್ ಸ್ವಾಗತಿಸಿದರು ಹೃದಯ್ ವಂದಿಸಿದರು, ಶ್ರುತಿಕಾ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here