ಬಂಟ್ವಾಳ : ತಾಲೂಕಿನ ತೆಂಕಬೆಳ್ಳೂರು ಎಂಬಲ್ಲಿ ಅಕ್ರಮವಾಗಿ ಟೆಂಪೋದಲ್ಲಿ ಕರು ಸಾಗಿಸುತಿದ್ದ ವೇಳೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಕರು ಸಹಿತ ಆರೋಪಿಗಳನ್ನು ಪೋಲಿಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರಿನಲ್ಲಿ ನಡೆದಿದೆ.
ಕಲ್ಲಗುಡ್ಡೆಯಿಂದ ಅಮ್ಮುಂಜೆಗೆ ಕರು ಸಾಗಿಸುತಿದ್ದ ವೇಳೆ ತೆಂಕಬೆಳ್ಳೂರು ಎಂಬಲ್ಲಿ ತಡೆದ ಕಾರ್ಯಕರ್ತರು ಆರೋಪಿಗಳಾದ ರಫೀಜ್ ಹಾಗೂ ಗೋಪಾಲ್ ಎಂಬವರನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.