ಬಂಟ್ವಾಳ; ಯುವ ವೇದಿಕೆ ಪೆರಾಜೆ (ರಿ) ಪೆರಾಜೆ ಗ್ರಾಮದ ಕೊಂಕಣಪದವು ಭಾಗದಲ್ಲಿ ವಿಶೇಷವಾಗಿ ಸಾಮರಸ್ಯ ದೀಪಾವಳಿ ಕಾರ್ಯಕ್ರಮ “ತುಡರ್ ” ಹಮ್ಮಿಕೊಳ್ಳಲಾಗಿತ್ತು.ಅಲ್ಲಿನ ಪರಿಸರ ಹಿಂದೂ ಬಾಂಧ ವರನ್ನು ಒಟ್ಟು ಸೇರಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ಭಜನಾ ಸಂಕೀರ್ತನೆ ಮಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಮಾಣಿ ಸುಬ್ರಹ್ಮಣ್ಯ ತುಡರ್ ಕಾರ್ಯಕ್ರಮದ ಹಿನ್ನೆಲೆ ಮತ್ತು ಇಂದಿನ ಪ್ರಸ್ತುತತೆ ಕುರಿತಾಗಿ ಮಾತನಾಡಿದರು.
ನಂತರ ಮನೆ ಮಂದಿಯೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂತೋಷದಿಂದ ದೀಪಾವಳಿ ಆಚರಿಸಿದರು. ಯುವ ವೇದಿಕೆ ಅಧ್ಯಕ್ಷ ಯತಿರಾಜ್ ಪೆರಾಜೆ, ಕಾರ್ಯದರ್ಶಿ ಜೀವನ್ ಮಠತ ಪಾಲು, ಸಂಚಾಲಕ ರಾಜಾರಾಮ್ ಕಡೂರ್, ಸಂಘಟನೆಯ ಪ್ರಮುಖರಾದ ಹರೀಶ್ ರೈ,ಉಮೇಶ್ ಎಸ್. ಪಿ, ವಿನಿತ್ ಶೆಟ್ಟಿ, ರವೀಂದ್ರ ,ವಿನೋದ್, ಬಾಲಕೃಷ್ಣ, ಸಂದೇಶ್ ,ಸಂದೀಪ್,ನಾಗೇಶ್, ಗಣೇಶ್ ,ಬಾಲಕೃಷ್ಣ ಗೌಡ,ಮನೋಜ್, ಬೇಬಿ,ಚೇತನ್, ಗಗನ್ ದೀಪ್,ಪ್ರಣವ್ ಮತ್ತಿತರರು ಉಪಸ್ಥಿತರಿದ್ದರು..