ಬಂಟ್ವಾಳ: 3ವರ್ಷದ ಪುಟ್ಟ ಬಾಲಕನಿಗೆ ಬಜರಂಗದಳ ಸಿಂತಾನಿಕಟ್ಟೆ ನೆರವು

0

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯ ಸಂತೋಷ್ ಮತ್ತು ಭವ್ಯ ಇವರ ಮಗನಾದ ಅರವ್ ಎನ್ನುವ 3ವರ್ಷದ ಪುಟ್ಟ ಬಾಲಕ ಕರೋಲಿ ಎನ್ನುವ ಬೀಕರ ಕಾಯಿಲೆಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 25 ಲಕ್ಷದವರೆಗೆ ಖರ್ಚು ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಹಿಂದೂಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಕಾರ್ಯಕರ್ತರೆಲ್ಲ ಒಟ್ಟು ಸೇರಿ ಭವತಿ ಬಿಕ್ಷಾಂದೇಹಿ ಟೀಮ್ ರಚಿಸಿ ನವರಾತ್ರಿಯ ದಿನದಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳಾದೇವಿ ಕ್ಷೇತ್ರದಲ್ಲಿ ಮತ್ತು ಮಹಾದೇವಿ ಮಹಾಮ್ಮಯಿ ದೆವಸ್ಥಾನ ಕೂಡಿಬೈಲು ಕ್ಷೇತ್ರದಲ್ಲಿ ಅರವ್ ನ ಚಿಕಿತ್ಸೆಗಾಗಿ ಸಹಾಯ ಹಸ್ತ ಯಾಚಿಸಿ ಸುಮಾರು 1ಲಕ್ಷ 75000 ಹಣವನ್ನು ಒಟ್ಟುಗೂಡಿಸಿ ಆ ಹಣವನ್ನು ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ಸಮ್ಮುಖದಲ್ಲಿ ಅರವ್ ತಂದೆ ತಾಯಿಯ ಕೈಗೆ ಹಸ್ತಾಂತರ ಮಾಡಿದರು.

ಮೂಡಬಿದ್ರೆಯ ಸೋಮಾನಾತ್ ಕೋಟ್ಯಾನ್ ಬಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ ಶಿವಪ್ರಸಾದ್ ತುಂಬೆ ದೀಪಕ್ ಅಜೆಕಲ ಸಂತೋಷ್ ಸರಪಾಡಿ ಪ್ರಸಾದ್ ಬೆಂಜನಪದವು ಅಭಿನ್ ರೈ ಬಜರಂಗದಳ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಘಟಕದ ಸದಸ್ಯರು ಹಾಗೂ ಬೆಳುವಾಯಿ ಬಜರಂಗದಳ ಸ್ಥಳೀಯ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here