ಬಂಟ್ವಾಳ : ಕಿಡಿಗೇಡಿಗಳಿಂದ ರಸ್ತೆಯಲ್ಲಿ ಆಕ್ಷೇಪಾರ್ಹ ಬರಹ

0

ಬಂಟ್ವಾಳ: ಕೇಂದ್ರ ಸರಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವ ಬೆನ್ನಲ್ಲೇ ಬಂಟ್ವಾಳದ ನಯನಾಡು ಗೋಳಿಯಂಗಡಿ ಸಂಪರ್ಕ ರಸ್ತೆಯ ಸ್ನೇಹಗಿರಿ ಎಂಬಲ್ಲಿ “ಚಡ್ಡಿಗಳೆ ಎಚ್ಚರಿಕೆ PFI ನಾವು ಮರಳಿ ಬರುತ್ತೇವೆ “ಎಂದು ಬಿಳಿ ಬಣ್ಣದ ಸ್ಪ್ರೆ ಪೈಂಟಿನಿಂದ ಬೆದರಿಕೆ ಬರಹ ಬರೆದಿದ್ದು ಮತ್ತೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಕೆಲ ಕಿಡಿಗೇಡಿಗಳು ಮುಂದಾಗಿದ್ದು, ಈ ಪ್ರಕರಣವನ್ನು ಪುಂಜಾಲಕಟ್ಟೆ ಪೋಲಿಸರು ಗಮನಿಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ಮತ್ತು ಸಾರ್ವಜನಿಕರಿಂದ ದೂರು ದಾಖಲು :

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತ ತಾಲೂಕಿನ ಬಿಜೆಪಿ ಯುವ ಮೋರ್ಚಾದ ನಾಯಕರಾದ , ಬಂಟ್ವಾಳ ಯುವಮೋರ್ಚಾದ ದಿನೇಶ್ ದಂಬೇದಾರ್, ಯತಿನ್ ಶೆಟ್ಟಿ ಕುಮಂಗಿಲ,ರಾಜೇಶ್ ಶೆಟ್ಟಿ ನಯನಾಡು ಹಾಗು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ಹೆಗ್ಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ ಹಾಗೂ ಸಾರ್ವಜನಿಕರಾದ ಪ್ರಕಾಶ್ ರಾವ್,ದಯಾನಂದ, ವಿಘ್ನೇಶ್,ಹರಿಂದ್ರ ಪೈ, ಜಯಪ್ರಸದ್, ನಿರಂಜನ್,ಆನಂದ,ಗುರುಪ್ರಸಾದ್ ಶೆಟ್ಟಿ,ಹರೀಶ್ ಶೆಟ್ಟಿ,ಗುರುಪ್ರಸಾದ್ ಶೆಟ್ಟಿ ಕೆರೆಕೊಡಿ,ವಿಜಯ್,ಅವಿನ್ ಕುಮಾರ್,ಚಂದ್ರಶೇಖರ್ ಮತ್ತಿತರು ದೂರು ದಾಖಲಿಸುವಂತೆ ಪುಂಜಾಲಕಟ್ಟೆ ಪೋಲಿಸ್‌ ಠಾಣೆಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here