ಕಡಬ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ವಿಕಲಚೇತನರ ವೈದ್ಯಕೀಯ ಶಿಬಿರ

0

ಕಡಬ: ವಿಕಲಚೇತನರ ವೈದ್ಯಕೀಯ ಶಿಬಿರ ಜ.೫ರಂದು ಕಡಬ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್‌ರವರ ನೇತೃತ್ವದಲ್ಲಿ ನಡೆಯಿತು.


ಸುಳ್ಯ ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಪದ್ಮನಾಭ ಎನ್., ಕಣ್ಣಿನ ತಜ್ಞೆ ಅರ್ಚನಾ, ಪುತ್ತೂರು ಸರಕಾರಿ ಆಸ್ಪತ್ರೆಯ ಇ.ಎನ್.ಟಿ ತಜ್ಞ ಯೈನಬ್ ಸುನು ಅಲಿರವರು ತಪಾಸಣೆ ನಡೆಸಿ ವಿಕಲಚೇತನರ ಗುರುತಿನ ಚೀಟಿ ನೀಡಿದರು. ಕಡಬ ತಾಲೂಕಿನ ವಿವಿಧ ಗ್ರಾಮಗಳಿಂದ ವಿಕಲಚೇತನ ಫಲಾನುಭವಿಗಳು ಶಿಬಿರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ವಿಕಲಚೇತನರ ಶಿಬಿರ ನಡೆಸಲು ಸಹಕಾರ ನೀಡಿದ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬರವರನ್ನು ವಿಕಲಚೇತನರ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾ ಎ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ., ಬಿಳಿನೆಲೆ ಗ್ರಾ.ಪಂ.ನ ವಿಜಯ ಕುಮಾರ್, ಐತ್ತೂರು ಗ್ರಾ.ಪಂ.ನ ಸಂತೋಷ್ ಪಿ, ಆಲಂಕಾರು ಗ್ರಾ.ಪಂ.ನ ಮೋನಪ್ಪ ಬಿ., ಕಾಣಿಯೂರು ಗ್ರಾ.ಪಂ.ನ ಧನಂಜಯ, ಶಿರಾಡಿ ಗ್ರಾ.ಪಂ.ನ ಸುನೀಲ್, ನೂಜಿಬಾಳ್ತಿಲ ಗ್ರಾ.ಪಂ.ನ ಸಜಿತ್, ಎಡಮಂಗಲ ಗ್ರಾ.ಪಂ.ನ ವಿಶ್ವನಾಥ, ಕುಟ್ರುಪಾಡಿ ಗ್ರಾ.ಪಂ.ನ ಚಂದ್ರಾವತಿ, ಸುಬ್ರಹ್ಮಣ್ಯ ಗ್ರಾ.ಪಂ.ನ ದಿವ್ಯಾ, ಮರ್ದಾಳ ಗ್ರಾ.ಪಂ.ನ ಶಾಂತಾ ಸಿ.ಎಚ್, ಕೊಲ ಗ್ರಾ.ಪಂ.ನ ಅತಿಕಮ್ಮ, ಕೊಂಬಾರು ಗ್ರಾ.ಪಂ.ನ ಶಿಲ್ಪಕಲಾ ಸಹಕರಿಸಿದರು.

LEAVE A REPLY

Please enter your comment!
Please enter your name here