ಬಂಟ್ವಾಳ: ತೋಟಗಾರಿಕೆ ಬೆಳೆಯೊಂದಿಗೆ ಹಣ್ಣಿನ ಬೆಳೆ ಬಗ್ಗೆಯೂ ಕೃಷಿಕರು ವಿಶೇಷ ತರಬೇತಿ ಪಡೆಯುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜೋ.ಪ್ರದೀಪ್ ಡಿಸೋಜ ಹೇಳಿದ್ದಾರೆ.
ಇಲ್ಲಿನ ಲೊರೆಟ್ಟೋ-ಅಗ್ರಾರ್ ಲಯನ್ಸ್ ಕ್ಲಬ್ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ ಲೊರೆಟ್ಟೋದಲ್ಲಿ ಭಾನುವಾರ ನಡೆದ ‘ರಂಬುಟಾನ್ ಮತ್ತು ಡ್ರಾಗನ್ ಫ್ರುಟ್’ ಬೆಳೆ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಜೇಸನ್ ಮೋನಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಡಾ.ಚಂದ್ರಶೇಖರ ಚೌಟ ಮೀಯಪದವು ಇವರು ರಂಬುಟಾನ್ ಬೆಳೆ ಬಗ್ಗೆ ಮಾಹಿತಿ ನೀಡಿದರು. ಧರ್ಮಗುರು ಮ್ಯಾಕ್ಸಿಂ ರೊಸಾರಿಯೊ, ಲಯನ್ಸ್ ಕ್ಲಬ್ ಅಧ್ಯಕ್ಷ ಎವ್ಜಿನ್ ಲೋಬೋ ಮತ್ತಿತರರು ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಿರಿಲ್ ಡಿಸಫಜ ಸ್ವಾಗತಿಸಿ, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ರೋಯ್ ಕಾರ್ಲೊ ವಂದಿಸಿದರು.