ಅಖಿಲ ಭಾರತೀಯ ಅಧಿವಕ್ತ ಪರಿಷತ್ ಇದರ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಾಗಾರ ಅಧಿವಕ್ತ ಪರಿಷತ್, ಬಂಟ್ವಾಳ, ವಕೀಲರ ಸಂಘ(ರಿ), ಬಂಟ್ವಾಳ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳದ ಜೆ. ಎಂ. ಎಫ್. ಸಿ. ನ್ಯಾಯಾಲಯದ ಮುಂಭಾಗದಲ್ಲಿ ಸೆ.7ರಂದು ನಡೆಯಿತು.
ಕಾರ್ಯಕ್ರಮವನ್ನು ಅಧಿವಕ್ತ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯಾಧ್ಯಕ್ಷ ರವೀಂದ್ರನಾಥ ಪಿ. ಎಸ್ ಉದ್ಘಾಟಿಸಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ(ರಿ) ಬಂಟ್ವಾಳದ ಅಧ್ಯಕ್ಷ ಬಿ. ಗಣೇಶಾನಂದ ಸೋಮಯಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಧಿವಕ್ತ ಪರಿಷತ್ ಮಂಗಳೂರಿನ ಜಿಲ್ಲಾಧ್ಯಕ್ಷೆ ಪುಷ್ಪಲತಾ, ನ್ಯಾಯಧೀಶರಾದ ಚಂದ್ರಶೇಖರ ವೈ ತಳವಾರ, ಕೃಷ್ಣಮೂರ್ತಿ, ಅಧಿವಕ್ತ ಪರಿಷತ್ ಬಂಟ್ವಾಳದ ಗೌರವಾಧ್ಯಕ್ಷ ರಾಜಾರಾಮ್ ನಾಯಕ್,ಅಧಿವಕ್ತ ಪರಿಷತ್ ಬಂಟ್ವಾಳದ ಅಧ್ಯಕ್ಷ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಮಂಗಳೂರಿನ ಹಿರಿಯ ವಕೀಲ ಉದಯಾನಂದ ಎ ಪ್ರೊಪೆಶನಲ್ ಎಥಿಕ್ಸ್ ಮತ್ತು ಪ್ಲೀಡಿಂಗ್ಸ್ ನ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಅಧಿವಕ್ತ ಪರಿಷತ್ ಬಂಟ್ವಾಳದ ಅಧ್ಯಕ್ಷ ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ಧನ್ಯವಾದ ಸಲ್ಲಿಸಿ, ವಕೀಲ ನಿತಿನ್ ಅವರು ನಿರ್ವಹಿಸಿದರು.