ಬಂಟ್ವಾಳ : ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಬೊಲ್ಪು ರೈತ ಉತ್ಪಾದಕರ ಯೋಜನೆ ಬಿ.ಸಿ.ರೋಡ್ ಆಶ್ರಯದಲ್ಲಿ ಸೆ. 2ರಂದು ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ತೆಂಗು ಕೃಷಿ ಮತ್ತು ಭತ್ತ ಕೃಷಿ ಮಾಹಿತಿ ಶಿಬಿರ ನಡೆಯಿತು. ಬಂಟ್ವಾಳ ತಾಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ತೆಂಗು ಕೃಷಿ ಬಗ್ಗೆ ಪವರ್ ಪಾಯಿಂಟ್ ಪ್ರೆಸಂಟೇಶನ್ ನೀಡಿದರು. ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ಬಿ. ಬಿ. ಅನಘವಾಡಿ ಭತ್ತದ ಕೃಷಿ ಮಾಹಿತಿ ನೀಡಿದರು.
ಬೊಲ್ಪು ರೈತ ಉತ್ಪಾದಕ ಯೋಜನೆ ವ್ಯವಸ್ಥಾಪನಾ ನಿರ್ದೇಶಕ ರಾಜಾ ಬಂಟ್ವಾಳ್ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸದಾನಂದ ಡಿ. ಶೆಟ್ಟಿ ರಂಗೋಲಿ, ಕೃಷ್ಣಪ್ಪ ಸಪಲ್ಯ ಅಂತರ, ಜಿ.ಪಂ. ಸದಸ್ಯ ಎ. ಸಿ. ಭಂಡಾರಿ, ಬೆಂಜನಪದವು ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾ.ನಿ. ಅಧಿಕಾರಿ ಎಡ್ವರ್ಡ್ ಫೆರ್ನಾಂಡಿಸ್, ಕರ್ನಾಕಟ ತೆಂಗು ಉತ್ಪಾದಕರ ಸಹಕಾರಿ ಸಂಘದ ಪ್ರವರ್ತಕ ಜಯಾನಂದ ಪೆರಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ನಿರ್ದೇಶಕ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.