ಪೆರ್ನೆ: ಶ್ರೀರಾಮಚಂದ್ರ ಶಾಲೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

0

ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಿ : ತಾರನಾಥ್

ಬಂಟ್ವಾಳ: ವಿದ್ಯಾರ್ಥಿಗಳು ಪರಿಸರವನ್ನು ಕುತೂಹಲದಿಂದ ನೋಡಿಕೊಂಡು ಬರವಣಿಗೆಯ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರ ಪ್ರೌಢ ಶಾಲೆ ಪೆರ್ನೆಯ ಮುಖ್ಯ ಶಿಕ್ಷಕ ತಾರನಾಥ ಶೆಟ್ಟಿ ಹೇಳಿದರು.

ಅವರು ಶ್ರೀರಾಮಚಂದ್ರ ಪ್ರೌಢಶಾಲೆ ಪೆರ್ನೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ್ ಮತ್ತು ಇಕೋ ಕ್ಲಬ್ ವತಿಯಿಂದ ಏರ್ಪಡಿಸಲಾದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕ.ಚು.ಸಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತ ಪುತ್ತೂರು ಮಾತನಾಡಿ ಚುಟುಕು ಸಾಹಿತ್ಯ ರಚನೆಯಿಂದ ಭಾಷಾ ಸಾಮರ್ಥ್ಯದೊಂದಿಗೆ ಸಾಹಿತ್ಯ ರಚನೆಯ ಅಭಿರುಚಿಯನ್ನು ಬೆಳೆಸಿಕೊಳ್ಳಬಹುದು ಎಂದರು.

ಕ.ಚು.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಚುಟುಕು ಸಾಹಿತ್ಯ ರಚನೆಯ ಬಗ್ಗೆ ತರಬೇತಿ ನೀಡಿದರು. ವಿದ್ಯಾರ್ಥಿಗಳ ಕವಿಗೋಷ್ಠಿಯಲ್ಲಿ ಅಶ್ವಿನಿ, ದಿವ್ಯಾ, ಶಕೀಲಾ, ಜಯರಾಮ, ರಶ್ಮಿ, ಮೋಕ್ಷಿತಾ, ಲತೀಕ್ಷಾ ಭಾಗವಹಿಸಿ ಸ್ವರಚಿತ ಚುಟುಕುಗಳನ್ನು ವಾಚಿಸಿದರು. ವಿಜ್ಞಾನ ಶಿಕ್ಷಕ ಚಂದ್ರಹಾಸ ರೈ, ಯೋಗ ಶಿಕ್ಷಕ ಚೆನ್ನಕೇಶವ ಡಿ.ಆರ್., ರಾಕೇಶ್ ಎ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here