ಪ್ರಧಾನಿ ನರೇಂದ್ರ ಮೋದಿಯ ಆಗಮನದಲ್ಲಿ ಸಮಯ ಬದಲಾವಣೆ; ಮಧ್ಯಾಹ್ನ 1 ಗಂಟೆಗೆ ಮೋದಿ ಕರಾವಳಿಗೆ

0

ಮಂಗಳೂರು; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮದ ಸಮಯದಲ್ಲಿ ಕೊಂಚ ಬದಲಾವಣೆಯಾಗಿದ್ದು ಸೆ.2ರಂದು ನಿಗದಿಯಾಗಿದ್ದ ಕಾರ್ಯಕ್ರಮಕ್ಕಿಂತ ಸುಮಾರು 2 ಗಂಟೆ ಮುಂಚಿತವಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪರಿಷ್ಕೃತ ಕಾರ್ಯಕ್ರಮದ ಪ್ರಕಾರ ಪ್ರಧಾನಿ ಸೆ.2ರಂದು 1ಗಂಟೆಗೆ ವಿಮಾನ ನಿಲ್ದಾಣ ಕ್ಕೆ ಆಗಮಿಸಿ ಎನ್ಎಂಪಿಎಯ ಕಾರ್ಯಕ್ರಮ ಹಾಗೂ ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ಮುಗಿಸಿ ಸಂಜೆ 3ಗಂಟೆಗೆ ಮಂಗಳೂ ರಿನಿಂದ ನಿರ್ಗಮಿಸಲಿದ್ದಾರೆ. ಮೊದಲು ನಿಗದಿಯಾಗಿದ್ದ ಕಾರ್ಯಕ್ರಮದ ಪ್ರಕಾರ ಸೆ.2ರಂದು ಸಂಜೆ3.15 ಗಂಟೆಗೆ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ
ಆಗಮಿಸಿ 5 ನಿರ್ಗಮನ ಎಂದಿತ್ತು ಅವರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರ ದಿಂದ ಸುಮಾರು 2ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.70 ಸಾವಿರ ಮಂದಿ ವಿವಿಧ ಸರಕಾರಿ ಯೋಜನೆ ಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. 1461 ಬಸ್,200ಕ್ಕೂ ಅಧಿಕ ಟೆಂಪೋ ಟ್ರಾವೆಲ್ಲರ್ ಗಳನ್ನು ಮುಂಗಡವಾಗಿ ಕಾದಿರಿಸಲಾಗಿದೆ. ಕಾರ್ಯ ಕ್ರಮಕ್ಕೆ ಆಗಮಿಸುವವರು ಸೆ.2ರಂದು ಬೆಳಿಗ್ಗೆ11.30ಮೊದಲು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಹಾಜರಿರಬೇಕು ಎಂದು ಸುದರ್ಶನ್ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸರಕಾರದ ಸಚಿವರಾದ ಸೋನುವಾಲ್,ಪ್ರಹ್ಲಾದ್ ಜೋಶಿ,ಶೋಭಾ ಕರಂದ್ಲಾಜೆ ,ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ, ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದು ಸುದರ್ಶನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ರಾದ ಜಗದೀಶ್ ಶೇಣವ,ರವಿಶಂಕರ್ ಮಿಜಾರ್, ಕಸ್ತೂರಿ ಪಂಜ,ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here