ಚಿಣ್ಣರ ಲೋಕ ಸೇವಾ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

0

ಬಂಟ್ವಾಳ: ಚಿಣ್ಣರ ಲೋಕ ಸೇವಾ ಸೌಹಾರ್ದ ಸಹಕಾರಿ ಸಂಘ ಬಿ.ಸಿ.ರೋಡಿನ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ಭಾನುವಾರ (ಆ.28) ಶುಭಾರಂಭಗೊಂಡಿತು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಾನಪದ, ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಚಿಣ್ಣರ ಲೋಕ ಸಂಸ್ಥೆ ಈಗ ಬ್ಯಾಂಕಿಂಗ್ ಕ್ಷೇತ್ರದತ್ತವೂ ತನ್ನ ಹೆಜ್ಜೆ ಇಟ್ಟಿದೆ. ಅನೇಕ‌ ಸಂಸ್ಥೆಗಳು ಹುಟ್ಟಿಕೊಂಡು ಕ್ರಮೇಣ ಮರೆಯಾಗುತ್ತದೆ. ಅದರೆ ಚಿಣ್ಣರ ಲೋಕ ಸಂಸ್ಥೆ ಮರೆಯಾಗಲು ಸಾಧ್ಯವೇ ಇಲ್ಲ ಯಾಕೆಂದರೆ ಬ್ಯಾಂಕಿಂಗ್ ಕ್ಷೇತ್ರದಂತಹ ಉತ್ತಮ‌ ಬೀಜವನ್ನು ಸಂಸ್ಥೆ ಬಿತ್ತಿದ್ದು ಅದು ಹೆಮ್ಮರವಾಗಿ ಬೆಳೆಯಲಿದೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ದೀಪ ಪ್ರಜ್ವಲಿಸಿ ಮಾತನಾಡಿ ಸಾಂಸ್ಕೃತಿಕ ಸಂಘಟನೆಯಾಗಿ ಪ್ರತೀ ವರ್ಷ ಕಾರ್ಯಕ್ರಮ ಸಂಘಟಿಸಿಕೊಂಡು ಈ ಸಂಸ್ಥೆ ಮುನ್ನಡೆದುಕೊಂಡು ಬಂದಿದೆ. ಬೇರೆ ಬೇರೆ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ ತೊಡಗಿಸಿಕೊಂಡವರು ಈ ಸಹಕಾರಿ ಸಂಘದಲ್ಲಿ ತೊಡಗಿಸಿಕೊಂಡಿರುವುದಂದ ಈ ಸಹಕಾರಿ ಸಂಘ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂದರು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಜವಬ್ದಾರಿಯುತವಾದ ಕೆಲಸವಾಗಿದೆ. ನನ್ನ ಅನುಭವದ ಜೊತೆಗೆ ಸಹಕಾರಿ ಸಂಘದ ಭವಿಷ್ಯದ ದಿನಗಳನ್ನು ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಂಘದ ಸ್ಥಾಪಕ ಮೋಹನದಾಸ್ ಕೊಟ್ಟರಿ ಚಿಣ್ಣರ ಲೋಕ ಸಂಸ್ಥೆ ಬೆಳೆದು ಬಂದ ದಾರಿ, ಸಹಕಾರಿ ಸಂಘ ಸ್ಥಾಪನೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ಇದರ ಹಿರಿಯ ವ್ಯವಸ್ಥಾಪಕ ಗುರು ಪ್ರಸಾದ್ ಬಂಗೇರ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಮಾರ್ ಮಲ್ಲೂರು ಉದ್ಯಮಿಗಳಾದ ಅವಿಲ್ ಮಿನೇಜಸ್, ರಾಜೇಂದ್ರ ಕುಮಾರ್ ಜೈನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಭಾಗವಹಿಸಿದ್ದರು.

ಕಾನೂನು ಸಲಹೆಗಾರ ಪಿ. ಜಯರಾಂ ರೈ, ನಿರ್ದೇಶಕರಾದ ಜಗನ್ನಾಥ ಚೌಟ, ಸುದರ್ಶನ್ ಜೈನ್, ತಾರನಾಥ ಕೊಟ್ಟಾರಿ, ಪದ್ಮನಾಭ ಮಯ್ಯ, ರಾಮಕೃಷ್ಣ ರಾವ್ ಬಿ., ನವೀನ್ ಕುಮಾರ್, ರಾಮಚಂದ್ರ ಕಬಕ, ವಿಶ್ವನಾಥ ಕೊಟ್ಟಾರಿ, ಜ್ಯೋತಿ ಮಾರ್ಟಿಸ್, ಅಕ್ಷತಾ ಮಳಲಿ, ಸೀತರಾಮ ಕಲ್ಲಡ್ಕ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.
ಗೌರವ ಕಾರ್ಯ ನಿರ್ವಾಹಣಾಧಿಕಾರಿ ಪ್ರಭಾಕರ ಪೈ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಿಣ್ಣರ ಲೋಕ ಸೇವಾ ಟ್ರಸ್ಟ್ ಇದರ ಕಲಾವಿದರಿಂದ ರಾಗ ರಂಜಿನಿ ರಸಮಂಜರಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here