ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ‌; ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

0

ವಿಟ್ಲ :   ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು  ಸಾಕ್ಷರತಾ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ  ಹಾಗೂ   ದ. ಕ .ಜಿ .ಪ .ಹಿರಿಯ ಪ್ರಾಥಮಿಕ ಶಾಲೆ,  ಪಾಂಡವರ  ಕಲ್ಲು  ಇಲ್ಲಿ ಆ.27ರಂದು   ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ತ್ರೋಬಾಲ್ ಪಂದ್ಯಾಟ ನಡೆಯಿತು.  ಬಾಲವಿಕಾಸ ಆಂಗ್ಲ ಮಾಧ್ಯಮ  ಶಾಲಾ ತಂಡವು  ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

 ಎಂಟನೇ ತರಗತಿಯ  14ರ ವಯೋಮಾನ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಹರ್ಷಿತ್ ಡಿ.ಕೆ .ಮತ್ತು ತನ್ವಿತ್ ಸಿ.ಜಿ .ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಈ ತಂಡವನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರ  ದಿನಕರ್ ಪೂಜಾರಿ ಹಾಗೂ  ವಿಶಾಲಾಕ್ಷಿ  ಹೆಚ್.ಆಳ್ವ ತರಬೇತುಗೊಳಿಸಿದ್ದಾರೆ.  ವಿಜೇತ ತಂಡಕ್ಕೆ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಮಟ್ಟದ ಸ್ಪರ್ಧೆ ಸೆ.7 ರಂದು  ಸೈಂಟ್  ಪೌಲರ್ ಹಿರಿಯ ಪ್ರಾಥಮಿಕ ಶಾಲೆ, ನಾರಾವಿಯಲ್ಲಿ ಜರಗಲಿದೆ.

LEAVE A REPLY

Please enter your comment!
Please enter your name here