ಬಂಟ್ವಾಳ : ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರ ತರಬೇತಿ ಕಾರ್ಯಾಗಾರ ಆ.23ರಂದು ನಡೆಯಿತು. ತರಬೇತಿಯ ಉದ್ಘಾಟನೆಯನ್ನು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷ ರವೀಂದ್ರ ಎಮ್ ಜೋಶಿ ನೆರವೇರಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಕೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶೋಭಾ ಬಿ.ಜಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರು ವಕೀಲರ ಸಂಘದ ವಕೀಲರು ತರಬೇತಿಯನ್ನು ನಡೆಸಿಕೊಟ್ಟರು. ತರಬೇತಿ ಕಾರ್ಯಾಗಾರದಲ್ಲಿ ಬೆಳ್ತಂಗಡಿ ತಾಲೂಕಿನ ಅರೆಕಾಲಿಕ ಕಾನೂನು ಸ್ವಯಂಸೇವಕರಾದ(PLV) ದಯಾನಂದ ಆರ್ ಕಿಲ್ಲೂರ್, ಗುರುರಾಜ್ ಗುರಿಪಳ್ಳ, ಕೆ ರಾಘವೇಂದ್ರ ಶೇಟ್ ಉಜಿರೆ, ಚಂದ್ರಶೇಖರ ಕನ್ಯಾಡಿ, ಸಂಜೀವ ಕೆ ಬೆಳ್ತಂಗಡಿ, ಪ್ರಕಾಶ್ ಬೆಳ್ತಂಗಡಿ, ಶಾಂತಪ್ಪ ನಿಡಿಗಲ್, ಎಂ. ಕೆ ಪ್ರಸಾದ್ ಆರ್ವ ಭಾಗವಹಿಸಿದ್ದರು. ಮಂಗಳೂರಿನ ಶ್ರೀ ಧ. ಮಂ. ಕಾನೂನು ಕಾಲೇಜಿನ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.