ಹಿರಿಯ ಸಾಹಿತಿ ಚಿಂತಕ ತುಳು ಭಾಷಾ ಹೋರಾಟಗಾರ ಉದಯ್ ಧರ್ಮಸ್ಥಳ ವಿಧಿವಶ

0

ಬೆಂಗಳೂರು: ಬೆಂಗಳೂರು-ಹಿರಿಯ ಪತ್ರಕರ್ತ, ಸಾಹಿತಿ, ಚಿಂತಕ, ಉತ್ತಮ ವಾಗ್ಮಿ, ಉದಯ ಧರ್ಮಸ್ಥಳರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.19 ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಉದಯರವರ ಸ್ವಗೃಹದಲ್ಲಿ ಆ.19 ರಂದು ರಾತ್ರಿಯ ವೇಳೆ ಕೊನೆಯುಸಿರೆಳೆದಿದ್ದಾರೆ. 1956ರಲ್ಲಿ ಜನಿಸಿದ್ದ ಉದಯ್ ಧರ್ಮಸ್ಥಳ ಕೆ.ಸೂರ್ಯನಾರಾಯಣ-ಗಿರಿಜಮ್ಮ ದಂಪತಿಗಳ ಪುತ್ರನಾಗಿ 1956ರಲ್ಲಿ ಉದಯ್ ಧರ್ಮಸ್ಥಳರವರು ಜನಿಸಿದ್ದು, ಬಾಲ್ಯವನ್ನು ಧರ್ಮಸ್ಥಳದಲ್ಲೇ ಕಳೆದಿದ್ದರು. ಕಾಲೇಜು ವಿದ್ಯಾಭ್ಯಾಸದ ನಂತರ ರಾಜಧಾನಿ ಬೆಂಗಳೂರು ಸೇರಿಕೊಂಡ ಉದಯರವರು ಸಾಹಿತ್ಯ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ.ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿದ್ದ ಉದಯ ಧರ್ಮಸ್ಥಳರವರು ಬೆಂಗಳೂರಿನ ಹಲವು ಸಂಘಟನೆಗಳಲ್ಲಿ ಭಾಗಿಯಾಗಿದ್ದರು.

ಧರ್ಮಸ್ಥಳದ ಪರಮ ಭಕ್ತನಾಗಿದ್ದ ಉದಯ್ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಇವರು  ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಪರಮ ಭಕ್ತನಾಗಿದ್ದ ಉದಯ ಧರ್ಮಸ್ಥಳರವರು, ಖಾವಂದರ ಬಗ್ಗೆಯೂ ಅಪಾರ ಪ್ರೀತಿ,ಗೌರವ ಹೊಂದಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ತುಳುಕೂಟ,ತುಳುವೆರೆ ಚಾವಡಿ ಮುಂತಾದ ಕರಾವಳಿಗರ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸಿದ್ದರು.

ಆರ್ಯಭಟ,ಕರಾವಳಿ ರತ್ನ,ಕರುನಾಡ ಸಿರಿ ಪ್ರಶಸ್ತಿ ಪುರಸ್ಕೃತರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗತಿಕ ಸಮಿತಿಯ ಸದಸ್ಯರೂ ಆಗಿದ್ದ ಉದಯ್ ಧರ್ಮಸ್ಥಳರವರಿಗೆ ಆರ್ಯಭಟ, ಕರಾವಳಿ ರತ್ನ, ಕರುನಾಡ ಸಿರಿ ಎಂಬ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ತುಳು ಸಾಹಿತ್ಯ ಪರಿಷತ್ ಸದಸ್ಯರಾಗಿದ್ದು ತುಳು ಪಠ್ಯ ಪುಸ್ತಕದ ರೂವಾರಿಗಳಲ್ಲಿ ಓರ್ವರಾಗಿದ್ದಾರೆ.

ತುಳು ಭಾಷೆಯ ಹೋರಾಟಗಳ ಗಟ್ಟಿ ಧ್ವನಿ ಉದಯ್ ಧರ್ಮಸ್ಥಳ ತುಳು ಭಾಷೆ ಎಂಟನೇ ಪರಿಚ್ಛೇಧಕ್ಕೆ ಸೇರಬೇಕು ಅನ್ನುವ ಕರಾವಳಿಯವರ ಕೂಗಿಗೆ ಬೆಂಗಳೂರಿನಲ್ಲಿ ಗಟ್ಟಿಧ್ವನಿಯಾಗಿದ್ದವರು ಉದಯ್ ಧರ್ಮಸ್ಥಳ. ತುಳು ಭಾಷೆಯ ವಿಚಾರದಲ್ಲಿ ನಿಷ್ಠುರವಾದಿಯಾಗಿದ್ದ ಉದಯರವರು ತುಳುವಿನ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗಿಯಾಗುತ್ತಿದ್ದರು.

ಆರು ತಿಂಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲ್ಪಟ್ಟಿದ್ದ ಉದಯ್ ಧರ್ಮಸ್ಥಳರವರು ಪತ್ನಿಮತ್ತು ಮಕ್ಕಳನ್ನು ಅಗಲಿದ್ದಾರೆ. ಜೊತೆಗೆ ಅಪಾರ ಬಂಧು ಮಿತ್ರರು ಅಭಿಮಾನಿಗಳನ್ನು ಅಗಲಿದ್ದಾರೆ. ಧರ್ಮಸ್ಥಳದ ದೊಂಡೋಲೆ ಮನೆಯ ಉದಯ್ ಧರ್ಮಸ್ಥಳರವರ ಸಹೋದರರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here