ಬಂಟ್ವಾಳ: ಕಡೇಶಿವಾಲಯದ ನಡ್ಯೇಲು ಎಂಬಲ್ಲಿ 10 ಕಳಸೆ ಗದ್ದೆಯಲ್ಲಿ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ವತಿಯಿಂದ 2ನೇ ವರ್ಷದ ʼಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣʼ ಕಾರ್ಯಕ್ರಮವು ಆ.14ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮತ್ತು ನಾರಾಯಣ ಗುರುಗಳಿಗೆ ಪುಷ್ಪಾರ್ಚಣೆಗೈಯುವ ಮೂಲಕ ಆರಂಭಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಡೇಶಿವಾಲಯ ಗ್ರಾ.ಪಂ ಸದಸ್ಯ ಹರಿಶ್ಚಂದ್ರ ಕಾಡಬೆಟ್ಟು ಮಾತನಾಡಿ ಬಿರುವೆರ್ ಕಡೇಶಿವಾಲಯ ಸಂಸ್ಥೆಯೂ ಹಡಿಲು ಬಿದ್ದ ಗದ್ದೆಯನ್ನು ಪುನಶ್ಚೇತನಗೊಳಿಸುತ್ತಿರುವುದು ಬಹಳ ಒಳ್ಳೆಯ ಕಾರ್ಯ ಇಂತಹ ಸಾಮಾಜಿಕ ಕಾರ್ಯನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ಇನ್ನೋರ್ವ ಅತಿಥಿ ಉದ್ಯೋಗಿ ಸುಧಾಕರ್ ಮುಚ್ಚಿಲ ಮಾತನಾಡಿ ಇತ್ತಿಚಿನ ಜನತೆ ಗದ್ದೆ ಸಾಗುವಳಿ ಅಲ್ಲದೆ ಗದ್ದೆಯ ಹತ್ತಿರ ಸುಳಿಯುವುದು ಕಡಿಮೆ ಆದರೆ ಇಲ್ಲಿ ಅದರ ತದ್ವಿರುದ್ಧವಾಗಿ ಸಮಾಜವನ್ನು ವ್ಯವಸಾಯದ ಕಡೆಗೆ ಮುಖ ಮಾಡಿಸುವಂತೆ ಮಾಡಿರುವುದು ಖುಷಿಯ ಸಂಗತಿ ಎಂದರು. ಸಂಘಟನೆ ಆರಂಭಿಸುವುದು ಸುಲಭ ಆದರೆ ಅದನ್ನು ಮುನ್ನಡೆಸುವುದು ಕಷ್ಟ. ಆದರೆ ಈ ಸಂಸ್ಥೆ ಅವನ್ನೆಲ್ಲ ಮೀರಿ ಬೆಳೆದು ನಿಂತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಡೇಶಿವಾಲಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮತ್ತು ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನ ಸದಸ್ಯ ಶಾಂತಪ್ಪ ಪೂಜಾರಿ ಉಳುಮೆ ಮಾಡಿದ ಬೆಳೆ ಉತ್ತಮ ಫಲ ಕೊಡಲಿ ದೇವರ ಆಶಿರ್ವಾದ ಸದಾ ಇರಲಿ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಪೂಜಾರಿ ಸುರ್ಲಾಜೆ, ಗೌರವಾಧ್ಯಕ್ಷ ಮೋಹನ್ ಕಲ್ಲಾಜೆ ಟ್ರಸ್ಟ್ ನ ಮಾಜಿ ಅಧ್ಯಕ್ಷ ಲೋಕನಾಥ ತಿಮರಾಜೆ, ಮಾಜಿ ಗೌರವಾಧ್ಯಕ್ಷ ಕೂಸಪ್ಪ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ವಿದ್ಯಾಧರ ಪೂಜಾರಿ, ಮಹಿಳಾ ಘಟಕ ಪದಾಧಿಕಾರಿಗಳು, ಸದಸ್ಯರು ಮತ್ತು ಕಡೇಶಿವಾಲಯ ಗ್ರಾ.ಪಂ ಸದಸ್ಯರಾದ ಪ್ರಮೀಳ ಕಡೆಕೊಳಿಮಜಲು, ಸರೋಜ ಭಾಸ್ಕರ್, ನಳಿನಾಕ್ಷಿ, ಹರ್ಷಿತ ಗಣೇಶ್, ಜಯ, ಭಾರತಿ ಸುರೇಂದ್ರರಾವ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ದಿನೇಶ್ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ವಿಶು ಪೂಜಾರಿ ಬುಡೋಳಿ ವಂದಿಸಿ, ಸಂಪ್ಯ ಅಕ್ಷಯ ಕಾಲೇಜಿನ ಉಪನ್ಯಾಸಕಿ ಭವ್ಯಶ್ರೀ ನಿರೂಪಿಸಿದರು. ನೇಜಿ ನೆಡುವ ಕಾರ್ಯಕ್ರಮವನ್ನು ಗದ್ದೆಗೆ ಹಾಲೆರೆದು ಮತ್ತು ಅಮೃತ ಮಹೋತ್ಸವದ ಅಂಗವಾಗಿ ಧ್ವಜವಂದನೆಗೊಳಿಸಿ ರಾಷ್ಟ್ರಗೀತೆ ಹಾಡುವುದರ ಮೂಲಕ ಚಾಲನೆ ನೀಡಲಾಯಿತು.