ಬಂಟ್ವಾಳ: ಕಶೆಕೋಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಲಾವತಿ ಭಟ್ ದಾಸಕೋಡಿ ಧ್ವಜಾರೋಹಣಗೈದರು. ಮಕ್ಕಳ ಇಂಗ್ಲೀಷ್, ಕನ್ನಡ ಭಾಷಣ, ನೃತ್ಯದ ಬಹುಮಾನ ವಿತರಿಸಲಾಯಿತು.
ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಆಪ್ತ ಸಮಾಲೋಚಕ ರಾದ ವಿದ್ಯಾ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಕಿಶೋರಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಲೂಸಿ ಸಿಕ್ವೇರಾ, ಅಂಗನವಾಡಿ ಸಹಾಯಕಿ ಅನುಷ, ಬಾಲವಿಕಾಸ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.








