ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆ

0

ಬಂಟ್ವಾಳ: ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಶಾ ಕಾರ್ಯಕರ್ತೆಯರ ಮಜ್ದೂರ್ ಸಂಘ, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಬೀಡಿ ಮಜ್ದೂರ್ ಸಂಘ, ಬಂಟ್ವಾಳ ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಬಿ.ಸಿ.ರೋಡ್‌ನ ಶಿಶು ಮಂದಿರದಲ್ಲಿ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಅಗಮಿಸಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅವರು ಮಾತನಾಡಿ, 1955ರಲ್ಲಿ ಪೂಜ್ಯ ದತ್ತೋಪಂತ್ ಬಾಪುರಾವ್ ಥೇಂಗಡಿಯವರು ಭಾರತೀಯ ಮಜ್ದೂರ್ ಸಂಘವನ್ನು ಸ್ಥಾಪಿಸಿದ ಹಿನ್ನೆಲೆ, ಸಂಘಟನೆಯ ಉಗಮ, ಕಾರ್ಮಿಕ ಚಳವಳಿಯಲ್ಲಿ ಅದರ ಪಾತ್ರ, ಸಾಧನೆಗಳು ಹಾಗೂ ಮುಂದಿನ ದಿನಗಳಲ್ಲಿ ಹೊಸ ಕ್ಷೇತ್ರಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ವಿವರಿಸಿದರು.

ಮುಖ್ಯ ಅತಿಥಿ ದ.ಕ ಜಿಲ್ಲಾ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ್ ಕೊಟ್ಟಾರಿ ಮಾತನಾಡಿ, ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ಅವರು, ಜಿಲ್ಲೆಯ ಸಂಘಟನೆಯ ಬೆಳವಣಿಗೆ, ವಿವಿಧ ಯೂನಿಯನ್‌ಗಳ ವಿಸ್ತರಣೆ ಹಾಗೂ ಮುಂದಿನ ದಿನಗಳ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿ ಕಾನೂನು ಸಲಹೆಗಾರ ವಕೀಲ ಜಯರಾಮ್ ರೈ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಂಎಸ್ ಉಪಾಧ್ಯಕ್ಷೆ ಗೀತಾ ಧರ್ಮರಾಜ್ ಅವರು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶ್ರಮಿಕ ಬಂಧುಗಳನ್ನು ಅಭಿನಂದಿಸಿ, ಮುಂದೆಯೂ ಇದೇ ರೀತಿಯ ಸಂಘಟನಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕರೆ ನೀಡಿದರು.

ಬಿಎಂಎಸ್ ಮೋಟಾರ್ ಮಜ್ದೂರ್ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ, ಆಶಾ ಕಾರ್ಯಕರ್ತೆಯರ ಬಂಟ್ವಾಳ ತಾ. ಅಧ್ಯಕ್ಷೆ ತುಳಸಿ ದೇವರಾಜ್, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಬಂಟ್ವಾಳ ತಾ. ಅಧ್ಯಕ್ಷ ಶ್ರೀಕಾಂತ್, ವಿವಿಧ ಸಂಯೋಜಿತ ಸಂಘಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶ್ರಮಿಕ ಬಂಧುಗಳು ಉಪಸ್ಥಿತರಿದ್ದರು.

ಭಾರತ ಮಾತೆ, ವಿಶ್ವಕರ್ಮ ಭಗವಾನ್ ಹಾಗೂ ಪೂಜ್ಯ ದತ್ತೋಪಂತ್ ಬಾಪುರಾವ್ ಥೇಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬೀಡಿ ಮಜ್ದೂರ್ ಸಂಘ ಜಿಲ್ಲಾ ಕಾರ್ಯದರ್ಶಿ ನಳಿನಿ ಅಡ್ಯಾರು ಶ್ರಮಿಕ ಗೀತೆ ಹಾಡಿದರು. ಬಿಎಂಎಸ್ ಸಂ. ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಡೀಲಾಕ್ಷೀ ಧನ್ಯವಾದ ಸಲ್ಲಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here