ಬಂಟ್ವಾಳ: ಟಿವಿ ನೋಡುತ್ತಿದ್ದ 13 ವರ್ಷದ ಬಾಲಕ ಆಕಸ್ಮಿಕವಾಗಿ ರಿಮೋಟ್ನ ಬ್ಯಾಟರಿ ನುಂಗಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ಬಾಲಕ ಬ್ಯಾಟರಿ ನುಂಗಿದ್ದ. ಪೋಷಕರು ನೈಸರ್ಗಿಕವಾಗಿ ಹೋಗಲೆಂದು ಊಟ, ಬಾಳೆಹಣ್ಣು ತಿನ್ನಿಸಿದ್ದರು. ಸ್ಕ್ಯಾನಿಂಗ್ನಲ್ಲಿ ಬ್ಯಾಟರಿ ಅಡ್ಡಲಾಗಿ ಸಿಲುಕಿರುವುದು ಪತ್ತೆಯಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಊಟ ಜೀರ್ಣವಾಗದ ಕಾರಣ ಎರಡು ಬಾರಿ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿಲ್ಲ. ಸೋಮವಾರ ಬೆಳಗ್ಗೆ 10 ಗಂಟೆಗೆ ಲ್ಯಾಪರೋಸ್ಕೋಪಿ ಮೂಲಕ ವೈದ್ಯರು ಯಶಸ್ವಿಯಾಗಿ ಬ್ಯಾಟರಿ ಹೊರತೆಗೆದಿದ್ದಾರೆ. ಬಾಲಕ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.








