‘ಜಗತ್ತಿನ ಮಹಾನ್ ಶಕ್ತಿಯಾಗಿ ಮೋದಿಜಿ ಬೆಳಗಲಿ’: ಪ್ರಭಾಕರ ಪ್ರಭು ಪ್ರಾರ್ಥನೆ

0

ಬಂಟ್ವಾಳ: “ಸನಾತನ ಹಿಂದೂ ಧರ್ಮದ ಪರಿಪಾಲನೆ, ರಾಷ್ಟ್ರೀಯ ವಿಚಾರಧಾರೆಯ ಮೂಲಕ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಜಿ ಜಗತ್ತಿನ ಮಹಾನ್ ಶಕ್ತಿಯಾಗಿ ಬೆಳಗಬೇಕು” ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕುಕ್ಕಿಪಾಡಿ ಹಾಗೂ ಎಲಿಯನಡುಗೋಡು ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ವಾಮದಪದವು ಸಮೀಪದ ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಪ್ರಭಾಕರ ಪ್ರಭು, “ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಭಾರತದಲ್ಲಿ ಅಧಿಕಾರದ ಜವಾಬ್ದಾರಿ ಪಡೆದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅತೀ ಸುಧೀರ್ಘ ಅವಧಿಗೆ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿ, ಪ್ರಪಂಚದಲ್ಲೇ ಅತ್ಯುನ್ನತ ನಾಯಕರಾಗಿ ಹೊರಹೊಮ್ಮಿರುವ ಮೋದಿಜಿ ಸರ್ವರಿಗೂ ಸಮಪಾಲು ಎಂಬ ಕಲ್ಪನೆಯಂತೆ ಅಧಿಕಾರ ನಡೆಸುತ್ತಿದ್ದಾರೆ. ಇನ್ನಷ್ಟು ದೀರ್ಘಾವಧಿ ಅಧಿಕಾರ ನಡೆಸಲು, ಆಯುರಾರೋಗ್ಯ ವೃದ್ಧಿಗೆ ಹಾಗೂ ಬರುವ ಎಲ್ಲಾ ವಿಘ್ನಗಳಿಗೆ ಪರಿಹಾರ ಪ್ರಾಪ್ತಿಯಾಗಬೇಕು” ಎಂದು ಬಿಜೆಪಿ ಕಾರ್ಯಕರ್ತರ ಪರವಾಗಿ ಪ್ರಾರ್ಥಿಸಿದರು.

ದೇವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ ಮಾವಿನಕಟ್ಟೆ ಪೂಜೆ ನೆರವೇರಿಸಿ ಮೋದಿಜಿ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿದ್ದಕಟ್ಟೆ ಪಿಎಸಿಎಸ್ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕುಕ್ಕಿಪಾಡಿ ಶಕ್ತಿ ಕೇಂದ್ರದ ಪ್ರಮುಖ ಯೋಗೀಶ್ ಆಚಾರ್ಯ, ಕುಕ್ಕಿಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್, ಬೂತ್ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ, ಪುಷ್ಪರಾಜ್ ಪೂಜಾರಿ, ಬೂತ್ ಕಾರ್ಯದರ್ಶಿ ಶಿವಾನಂದ ಪೂಜಾರಿ, ಪ್ರಭಾತ್ ನಾಯಕ್, ಪ್ರವೀಣ್ ಶೆಟ್ಟಿ, ಹರೀಶ್ ಪೂಜಾರಿ, ರಾಜು ಪೂಜಾರಿ, ಯಶವಂತ ಆಚಾರ್ಯ ಉಪ್ಪಿರ, ಪೂವಪ್ಪ ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here