

ಬಂಟ್ವಾಳ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ನೆಲ್ಯಾರು ದೇವಪ್ಪ ಪೂಜಾರಿ ಅವರ ಮನೆಯ ಒಂದು ಭಾಗ ಗಾಳಿ ಮಳೆಗೆ ಬಿದ್ದು ಹಾನಿಯಾಗಿದ್ದು, ಮಾಹಿತಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ಶೌರ್ಯ ತಂಡದ ಮಾಮೇಶ್ವರ ವ್ಯಾಪ್ತಿಯ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ದುರಸ್ತಿಗೆ ಬೇಕಾದ ಸಲಕರಣೆಗಳನ್ನು ಒಟ್ಟುಗೂಡಿಸಿ ದುರಸ್ತಿ ಮಾಡಿ ಕೊಟ್ಟರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ದುರಸ್ತಿ ಕಾರ್ಯಕ್ರಮದ ಶ್ರಮದಾನದಲ್ಲಿ ಪಾಲ್ಗೊಂಡರು.
ಯೋಜನೆಯ ಕಿಲಿಂಗ ಒಕ್ಕೂಟದ ಅಧ್ಯಕ್ಷ ಶ್ರೀಯುತ ದಯಾನಂದ್, ಮಾಮೇಶ್ವರ ಒಕ್ಕೂಟದ ಸೇವಾ ಪ್ರತಿನಿಧಿ ಯಶೋಧ ಶೌರ್ಯ ತಂಡದ ಜೊತೆಗಿದ್ದು ಸಹಕರಿಸಿದರು.


