`ರಾಜಧರ್ಮವನ್ನು ಪಾಲಿಸಿ, ಆಡಳಿತ ನಿರ್ವಹಿಸಿದ ತೃಪ್ತಿ ನನಗಿದೆ’ ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

0

ವಿಟ್ಲ : ಕಳೆದ ನಾಲ್ಕು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕನಾಗಿ ನಿಜವಾದ ರಾಜಧರ್ಮವನ್ನು ಪಾಲಿಸಿ, ಆಡಳಿತ ನಿರ್ವಹಿಸಿದ ತೃಪ್ತಿ ತನಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.


ಅವರು ಬಿ.ಸಿ.ರೋಡಿನ ಕಚೇರಿಯಲ್ಲಿ ಮಾ. 29ರಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 2018 ರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಆರಂಭದಲ್ಲಿ ವಿರೋಧ ಪಕ್ಷದ ಶಾಸಕನಾಗಿದ್ದೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕದ ಎರಡು ವರ್ಷ ಕೋವಿಡ್ ಎದುರಾಗಿತ್ತು.ಆ ಸಂಕಷ್ಡಗಳ ನಡುವೆಯೂ ಜನರ ಜೊತೆಗಿದ್ದು ಸೇವೆ ನೀಡಿದ ತೃಪ್ತಿ ತನಗಿದೆ ಎಂದ ಅವರು, ರಾಜಧರ್ಮವನ್ನು ಪಾಲಿಸಿ ಸರ್ವಜನರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ನೀಡಿದ ಮಾತಿಗೆ ಬದ್ದನಾಗಿ ಕ್ಷೇತ್ರದ ಜನರ ಹಿತ ಕಾಯುವ ಕೆಲಸ ಮಾಡಿದ್ದೇನೆ ಎಂದರು.


ಶಾಸಕನಾಗಿ 2 ಸಾವಿರ ಕೋಟಿಗೂ ಅಧಿಕ ಅನುದಾನಗಳ ಮೂಲಕ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಿzನೆ ಎಂದ ಅವರು,ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಕೋಮುಗಲಭೆ, ಅಹಿತಕರ ಘಟನೆಗಳು ನಡೆಯದಿರುವುದು ಬಹಳ ಸಂತೃಪ್ತಿ ತಂದಿದೆ. ಶಾಂತಿಯುತ ಬಂಟ್ವಾಳಕ್ಕೆ ಕಾರಣರಾದ, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕುಡಿಯುವ ನೀರು, ರಸ್ತೆ ಸಹಿತ ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡಿರುವುದಾಗಿ ಅವರು ಈ ಸಂದರ್ಭ ವಿವರ ನೀಡಿದರು.

LEAVE A REPLY

Please enter your comment!
Please enter your name here