ವಿಟ್ಲ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ಕಣಿಯೂರಿನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಿಕಾ ಕುಟುಂಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ನೇತ್ರತ್ವದಲ್ಲಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯಿಂದ ಪುನರ್ ವಸತಿಗಾಗಿ ರೂ.2.50 ಲಕ್ಷ ರೂಪಾಯಿ ನಗದು ಹಣವನ್ನು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಹಸ್ತಾಂತರ ಮಾಡಲಾಯಿತು.
ಕಳೆದ ಆರು ತಿಂಗಳ ಹಿಂದೆ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿಯಾಗಿದ್ದ ಆತ್ಮಿಕಾ ಳ ಶವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಭಜರಂಗದಳ ಕಾರ್ಯಕರ್ತರು ಪೋಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಪೋಲೀಸರು ಇಲ್ಲಿನ ನಿವಾಸಿ ಶಾಹುಲ್ ಹಮೀದ್ ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.
ಬಂಟ್ವಾಳ ಶಾಸಕರ ಕಾರ್ಯ ಶ್ಲಾಘನೀಯ; ಮುರಳಿಕೃಷ್ಣ ಹಸಂತಡ್ಕ
ಈ ವೇಳೆ ಮಾತನಾಡಿದ ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ರವರು
ಅತ್ಮಿಕಾಳನ್ನು ಕಳಕೊಂಡ ಬಡ ಕುಟುಂಬಕ್ಕೆ ನೆರವಾಗಿರುವ ಬಂಟ್ವಾಳ ಶಾಸಕ ರಾಜೇಶ್ ಅವರ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮುಸ್ಲಿಂ ವ್ಯಕ್ತಿಯೋರ್ವನ ದುಷ್ಪ್ರೇರಣೆಯಿಂದ ಆತ್ಮಿಕಾಳ ಸಾವು ಸಂಭವಿಸಿತ್ತು.
ಆರ್ಥಿಕ ವಾಗಿ ಹಿಂದುಳಿದ ದಲಿತ ಬಡಕುಟುಂಬಕ್ಕೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಂದೇ ಭರವಸೆ ನೀಡಿದ್ದರು. ಮಾತಿನಂತೆ ಬಿಜೆಪಿ ಕ್ಷೇಮ ನಿಧಿಯಿಂದ ನೆರವು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರು ದೇವಪ್ಪ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಆರಳ, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಪಂಚಾಯತ್ ಸದಸ್ಯರಾದ ಪಟ್ಲಗುತ್ತು ರಘುನಾಥ ಶೆಟ್ಟಿ, ರಘುರಾಮ ಶೆಟ್ಟಿ ಕನ್ಯಾನ ಮೊದಲಾದವರು ಉಪಸ್ಥಿತರಿದ್ದರು.