ಕಟ್ಟೆಮಾರು ಶ್ರೀ ಮಂತ್ರ ದೇವತಾ ಕ್ಷೇತ್ರ ಅಮ್ಟೂರು- ವಾರ್ಷಿಕೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ

0

ಕಲ್ಲಡ್ಕ ;ದೈವ ಆರಾಧನೆ ಮೂಲಕ ಹಿಂದೂ ಸಮಾಜದ ಕುಟುಂಬಗಳು ಒಗ್ಗಟ್ಟಿನಿಂದ ಇರಲು ಸಾಧ್ಯವಾಗಿದೆ, ಅಂತಹ ದೈವರಾದನೆಯ ಮೂಲ ಕಟ್ಟುಪಾಡುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ದೈವರಾಧನೆ ನಡೆಸಿಕೊಂಡು ಬರುತ್ತಿರುವ ಮಂತ್ರ ದೇವತಾ ಸಾನಿಧ್ಯ ಎಲ್ಲಾ ದೈವ ಆರಾಧನಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬಂಟ್ವಾಳ ತಾಲೂಕು ಆಮ್ಟೂರ್ ಗ್ರಾಮದ ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ಇಲ್ಲಿನ ವಾರ್ಷಿಕ ಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತು ವಹಿಸಿದ್ದರು.
ಈ ಸಂದರ್ಭದಲ್ಲಿ ಮಂತ್ರ ದೇವತಾ ಜನಸೇವಾ ಟ್ರಸ್ಟ್ ವತಿಯಿಂದ ಹಾಗೂ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ವತಿಯಿಂದ ಅಸಕ್ತರನ್ನು ಗುರುತಿಸಿ ಧನಸಹಾಯ ನೀಡಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಪಡೆದವರನ್ನು ಗುರುತಿಸಿ ಅಭಿನಂದಿಸಲಾಯಿತು.

ಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ ಮಂತ್ರ ದೇವತೆ ಸಂಬಂಧಪಟ್ಟ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ಭಾರತ್ ಗ್ಲಾಸ್ ಅಂಡ್ ಕ್ರಾಕರಿಸ್ ಸಿಯಾನ ಚಿಕ್ಕನ್ ಕಾನ್ಸೆಪ್ಟ್ ಮ್ಯನಿಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಇದರ ಪಿ ಜಗದೀಶ್ ಕುಮಾರ್ ಮತ್ತು ಸ್ನೇಹ ಜಗದೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬಂಟ್ವಾಳದ ಎ ಇ ಇ ತಾರನಾಥ ಸಾಲಿಯಾನ್ ಪಿ, ಎ ಪಿ ಎಂ ಸಿ ಸಕಲೇಶಪುರ ಇದರ ಮಾಜಿ ಅಧ್ಯಕ್ಷ ರಂಜೇಶ್, ಚಲನಚಿತ್ರ ನಟಿ ನವ್ಯ ಪೂಜಾರಿ, ವಿಶಾಖ ಶೆಟ್ಟಿ ಮುಂಬೈ, ಮೀಶಲಾಕ್ಷಿ ಎನ್ ಬೆಂಗಳೂರು, ಗಣೇಶ್ ಇಂಡಸ್ಟ್ರೀಸ್ ದೇರಳಕಟ್ಟೆ ಯ ಶರತ್ ರಾಜ್ ಶೆಟ್ಟಿ, ವಿಜಯಕುಮಾರ್ ಬೆಳ್ತಂಗಡಿ, ಯಾದವ ಬಾಣಬೆಟ್ಟು, ಮುಂಬೈಯ ಉದ್ಯಮಿ ಹರೀಶ್ ಶೆಟ್ಟಿ, ಅಶೋಕ ಕರ್ಕೇರ ಸಜೀಪ, ಯಶವಂತ ಬಂಗೇರ ಕಾಪು, ಪಂಜಿಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಸುಪ್ರೀತ್ ಶೆಟ್ಟಿ ಬಾಳೆಹೊನ್ನೂರು, ಪಿ ಸಿ ಜಯರಾಮ್ ಸುಳ್ಯ, ಕಿಶೋರ್ ಕುಮಾರ್ ಕಟ್ಟೆ ಮಾರ್, ಮೊದಲಾದವರು ಉಪಸ್ಥಿತರಿದ್ದರು.


ಮಂತ್ರ ದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಸ್ವಾಗತಿಸಿ, ವಸಂತ ಪೂಜಾರಿ ಬಟ್ಟಹಿತ್ತಿಲು ವಂದಿಸಿದರು, ದಿನೇಶ್ ರಾಯೀ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಶ್ರೀ ಮಂತ್ರ ದೇವತೆಗೆ ವಿಶೇಷವಾಗಿ ದೊಂದಿ ಬೆಳಕಿನಲ್ಲಿ ನರ್ತನ ಸೇವೆ ಜರಗಿತು,

LEAVE A REPLY

Please enter your comment!
Please enter your name here